ಎರಡನೇ ದಿನ ಲೈನ್ ಟ್ರಾನ್ಸಾಕ್ಟ್ ಗಣತಿ

HUN-MAY-24-3(LINE TRANSACT)
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜನೆಗೊಂಡಿರುವ ಆನೆಗಣತಿ ಎರಡನೇ ದಿನ ಗಸ್ತು ಸಿಬ್ಬಂದಿ ಮಾಹಿತಿ ಪರಿಶೀಲಿಸಿ ದಾಖಲಿಸಿದರು.
Published on

ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜನೆಗೊಂಡಿರುವ ಆನೆಗಣತಿಯ ಎರಡನೇ ದಿನ ಶುಕ್ರವಾರದಂದು ಲೈನ್ ಟ್ರಾನ್ಜಾಕ್ಟ್ ಗಣತಿ ಕಾರ್ಯ ನಡೆಸಲಾಯಿತು.
ಎರಡನೇ ದಿನ ಗಣತಿ ಕಾರ್ಯಕ್ಕಾಗಿ ಸಿದ್ಧಪಡಿಸಿರುವ ಟ್ಯಾನ್ಸಾಕ್ಟ್ ಲೈನ್‌ಗಳ ಮೇಲೆ ಗಸ್ತು ಸಿಬ್ಬಂದಿ ನಡೆದುಕೊಂಡು ಎರಡೂ ಬದಿಯಲ್ಲಿ ಕಾಣಸಿಗುವ ಆನೆ ಲದ್ದಿ, ಪಾದದ ಅಚ್ಚುಗಳನ್ನು ಗುರುತಿಸಿಕೊಂಡು ಲದ್ದಿಗಳು ಇತ್ತೀಚಿನದ್ದೋ ಅಥವಾ ಎರಡು ಮೂರು ದಿನಗಳ ಹಿಂದಿನದ್ದೋ, ಪಾದಗಳ ಅಚ್ಚು ಹಳೆಯದೋ, ಹೊಸದೋ ಎಂಬುದನ್ನು ಹಾಳೆಯಲ್ಲಿ ದಾಖಲಿಸಿಕೊಂಡರು. ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡು ಸಂಜೆ 5ರವರೆಗೆ ಗಸ್ತಿನಲ್ಲಿದ್ದ 300ಕ್ಕೂ ಹೆಚ್ಚು ಸಿಬ್ಬಂದಿ ಗಣತಿಕಾರ್ಯ ಕೈಗೊಂಡರು. ಪ್ರತಿ ತಂಡವೂ 2 ಕಿ.ಮೀ. ವ್ಯಾಪ್ತಿಯಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿತು. ಮೂರನೇ ದಿನದಂದು ಕೆರೆಕಟ್ಟೆಗಳ ಬಳಿ ಗಣತಿ ಸಿಬ್ಬಂದಿ ಕಾದು ಕುಳಿತು ಆನೆಗಳ ಮಾಹಿತಿ ಕಲೆಹಾಕಲಿದ್ದಾರೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net