ಕರೊನಾ ಎರಡನೇ ಅಲೆಗೆ ಬಲಿಯಾದ ವೈದ್ಯರು ಎಷ್ಟು ಗೊತ್ತಾ?

Doctors 26 april 20
Published on

ನವದೆಹಲಿ: ಕೋವಿಡ್ 19 ಎರಡನೇ ಅಲೆಗೆ ಭಾರತದಲ್ಲಿ 34 ವೈದ್ಯರು ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ತಿಳಿಸಿದೆ. ಮಾರ್ಚ್ ಕೊನೆ ವಾರದಲ್ಲಿ ಎರಡನೆ ಅಲೆ ಭಾರತದಲ್ಲಿ ಆರಂಭವಾಯಿತು. ಮೊದಲ ಅಲೆಗಿಂತ ಎರಡನೇ ಅಲೆ ಮಾರಕವಾಗಿದೆ ಎಂದು ಐಎಂಎ ಅಭಿಪ್ರಾಯಪಟ್ಟಿದೆ.

ವಿಶೇಷವೆಂದರೆ ಮೃತಪಟ್ಟ 34 ವೈದ್ಯರಲ್ಲಿ ಒಬ್ಬರು 28 ವರ್ಷದವರು ಹಾಗೂ ಇಬ್ಬರು 34 ವರ್ಷದ ಯುವ ವೈದ್ಯರಾಗಿದ್ದಾರೆ ಎಂದು ಐಎಂಎ ತಿಳಿಸಿದೆ. ಉಳಿದ ಬಹುತೇಕರು 50 ರಿಂದ 70 ವರ್ಷದವರಾಗಿದ್ದಾರೆ. ಇದರಲ್ಲಿ ಬಿಹಾರ, ಮಹಾರಾಷ್ಟ್ರದ ತಲಾ ಐವರು ಹಾಗೂ ದೆಹಲಿ ಮತ್ತು ಉತ್ತರ ಪ್ರದೇಶದ ತಲಾ ನಾಲ್ವರು ವೈದ್ಯರು ಮೃತಪಟ್ಟಿದ್ದಾರೆ.

ಕೋವಿಡ್ ಮೊದಲ ಅಲೆಯಲ್ಲಿ ದಾಖಲೆಗಳ ಪ್ರಕಾರ ಭಾರತದಲ್ಲಿ 730 ವೈದ್ಯರು ಮೃತಪಟ್ಟಿದ್ದರು.

ಕೋವಿಡ್​ನಿಂದಾಗಿ ಅತಿ ಹೆಚ್ಚು ಸಂಕಷ್ಟದಲ್ಲಿರುವವರು ವೈದ್ಯರು ಹಾಗೂ ನರ್ಸ್​ಗಳು. ಹೀಗಾಗಿ ಮೊದಲ ಹಂತದಲ್ಲೇ ಮುಂಚೂಣಿ ಕೋವಿಡ್ ವಾರಿಯರ್​ ಆಗಿರುವ ಇವರಿಗೆ ಲಸಿಕೆ ದೊರೆಯುವಂತೆ ಮಾಡಲಾಯಿತು. ಈಗಾಗಲೇ ಶೇ 80 ರಷ್ಟು ಲಸಿಕಾಕರಣ ಮುಗಿದಿದೆ ಎಂದು ಐಎಂಎ ಹಿರಿಯ ಸದಸ್ಯ ರವಿ ವಾಂಖಡೆಕರ್ ಹೇಳಿದ್ದಾರೆ. ಅಲ್ಲದೇ ವೈದ್ಯರು ಕೋವಿಡ್​ನಿಂದ ಮೃತಪಟ್ಟರೆ ಹೆಚ್ಚಿನ ಪರಿಹಾರ ಧನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net