

ಹನಗೋಡು: ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಕೆಂಪೇಗೌಡನಕೊಪ್ಪಲು ಗ್ರಾಮದಿಂದ ಶುಂಠಿ ಬೇಸಾಯ ಮಾಡಲು ಸಮೀಪದ ಸಿಂಡೇನ ಹಳ್ಳಿ ಗ್ರಾಮಕ್ಕೆ ಬಂದಿದ್ದ 55 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ದೃಢಪಪಟ್ಟ ಹಿನ್ನೆಲೆಯಲ್ಲಿ ಆತ ತಂಗಿದ್ದ ಸಂಬಂಧಿಕರ ಮನೆ ಹಾಗೂ ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಜೂ.30 ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಜು.4ರಂದು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. 7ರಂದು ವರದಿಯಲ್ಲಿ ಸೋಂಕು ತಗುಲಿರುವುದು ದೃಧಪಟ್ಟ ಹಿನ್ನೆಲೆಯಲ್ಲಿ ಹುಣಸೂರು ತಾಲೂಕು ಆಡಳಿತ ಗುರುವಾರ ಸಂಜೆ ಬೀದಿಯನ್ನು ಸೀಲ್‌ಡೌನ್ ಮಾಡಿದೆ.
ಹುಣಸೂರು ಗ್ರಾಮಾಂತರ ಠಾಣೆಯ ಎಸ್‌ಐ ಶಿವಪ್ರಕಾಶ್, ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ, ಗ್ರಾಪಂನ ಪ್ರಭಾರ ಪಿ.ಡಿ.ಒ ನಾಗೇಂದ್ರಕುಮಾರ್, ಡಾ.ಸಂದೀಪ್ ನೇತೃತ್ವ ವಹಿಸಿದ್ದರು. ಅಲ್ಲದೆ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.