ಸ್ಮಶಾನಕ್ಕೂ ಸೀಲ್​ಡೌನ್​!

Sealdown Cemetery
Published on

ವಿಜಯಪುರ: ಇದುವರೆಗೂ ಗ್ರಾಮ, ಏರಿಯಾ, ಮನೆ, ಕಚೇರಿಗಳನ್ನು ಸೀಲ್​ಡೌನ್​ ಮಾಡಿದ್ದನ್ನು ಕೇಳಿದ್ದೆವು. ಇದೀಗ ಸ್ಮಶಾನಕ್ಕೂ ಸೀಲ್​ಡೌನ್​ ವ್ಯಾಪ್ತಿ ವಿಸ್ತರಿಸಿಕೊಂಡಿದೆ.

ವಿಜಯಪುರದ ಚಾಲುಕ್ಯ ನಗರದಲ್ಲಿನ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನವನ್ನು ಸ್ಥಳೀಯರೇ ಸೀಲ್​ಡೌನ್ ಮಾಡಿದ್ದಾರೆ. ಕರೋನಾ ಸೋಂಕಿನ ಹಾವಳಿ ನಿಲ್ಲುವವರೆಗೂ ಈ ಸ್ಮಶಾನದಲ್ಲಿ ಯಾರ ಅಂತ್ಯಕ್ರಿಯೆಯನ್ನು ಇಲ್ಲಿ ಮಾಡುವಂತಿಲ್ಲ ಎಂದು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿರಿ ಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!

ಕರೊನಾ ಸೋಂಕಿನಿಂದ ಮೃತಪಟ್ಟವರ ದೇಹವನ್ನು ಇಲ್ಲಿನ ಸ್ಮಶಾನದಲ್ಲಿ ಹೂಳಿದ್ದಾರೆ ಎಂದು ಆತಂಕಗೊಂಡ ಸ್ಥಳೀಯರು ಸ್ಮಶಾನವನ್ನೇ ಸೀಲ್​ಡೌನ್ ಮಾಡಿಕೊಂಡಿದ್ದಾರೆ.

ಪಿಪಿಇ ಕಿಟ್ ಧರಿಸಿ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಅದು ಕರೊನಾ ಸೋಂಕಿತನ ಶವ ಎಂದು ಆರೋಪಿಸಿರುವ ಸ್ಥಳೀಯರು, ಸ್ಮಶಾನದ ಗೇಟಿಗೆ ಬೇಲಿ ಹಾಕಿದ್ದಾರೆ.

ಕರೊನಾ ಸೃಷ್ಟಿರೋ ಫಜೀತಿ ಒಂದೆರಡಲ್ಲ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲ ಗ್ರಾಮಸ್ಥರು ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಪ್ರವೇಶ ನಿಷೇಧಿಸಿ ಡಂಗೂರ ಸಾರಿಸಿದ್ದರು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಸೂಲಿ ಮಾಡುವುದಾಗಿಯೂ ಎಚ್ಚರಿಸಿದ್ದರು. ಇದೀಗ ವಿಜಯಪುರದಲ್ಲಿ ಸ್ಮಶಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net