ಸೀಲ್​ಡೌನ್​ ಏರಿಯಾದ ಖಾಲಿ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಾಡಿದ ವ್ಯಕ್ತಿ; ಆತನನ್ನು ನೋಡಿ ಯುವಕ ಮಾಡಿದ್ದು ಏನು ಗೊತ್ತಾ?

Seal Down 15 April 4
Published on

ವಿಜಯಪುರ: ಸೀಲ್​ಡೌನ್​ನಿಂದ ಖಾಲಿ ಇರುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಅವಾಂತರ ಸೃಷ್ಟಿಸಿದ ಘಟನೆ ನಗರದ ಸ್ಟೇಶನ್​ ರಸ್ತೆಯ ಬಡೆ ಕಮಾನ್​ ಬಳಿ ನಡೆದಿದೆ.

ಈತನೋರ್ವ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ರಸ್ತೆ ಖಾಲಿ ಇದ್ದುದರಿಂದ ವಸ್ತ್ರವನ್ನೆಲ್ಲ ಬಿಚ್ಚಿಕೊಂಡು ಓಡಾಡುತ್ತಿದ್ದ. ಆತನನ್ನು ನೋಡಿದ ಯುವಕನೋರ್ವ ತನ್ನ ಶರ್ಟ್​ ಬಿಚ್ಚುಕೊಟ್ಟು ಮಾನವೀಯತೆ ಮೆರೆದಿದ್ದಾನೆ.

ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪ್ರೋಬೆಷನ್ ಪಿಎಸ್‌ಐ ಸೋಮನಗೌಡ ಗೌಡ್ರು ಕೂಡ ಆ ವ್ಯಕ್ತಿಗೆ ಬಟ್ಟೆ ತೊಡಿಸಲು ಸಹಾಯ ಮಾಡಿ, ಅಲ್ಲಿಂದ ಕಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net