ಬಿಜೆಪಿ, ಸಂಘಪರಿವಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

SDPI protests against BJP, Sangh Parivar
ಎಸ್‌ಡಿಪಿಐ ಕಾರ್ಯಕರ್ತರುಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇಮ್ರಾನ್, ಖಲೀಂ, ಸಲೀಂ ಖಾನ್, ಜಿಲಾನ್, ಫೈರೋಜ್ ರಹಮಾನ್ ಇದ್ದರು.
Published on

ಶಿವಮೊಗ್ಗ: ಸಂಘಪರಿವಾರ ಹರಡಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ ಎಂದು ಆರೋಪಿಸಿ ಎಸ್‌ಡಿಪಿಐ(ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಕಾರ್ಯಕರ್ತರು ಶನಿವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಣಿಪುರದಲ್ಲಿ ಜಾನಾಂಗೀಯ ಕಲಹ, ಹರಿಯಾಣಾದಲ್ಲಿ ಕೋಮುಗಲಭೆ, ಮಹಾರಾಷ್ಟ್ರದಲ್ಲಿ ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿ ದೇಶದ ನಾನಾ ಭಾಗಗಳಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಇಂತಹ ಸನ್ನಿವೇಶಕ್ಕೆ ಬಿಜೆಪಿ ಮತ್ತು ಸಂಘಪರಿವಾರದ ದ್ವೇಷದ ರಾಜಕಾರಣವೇ ಕಾರಣವೆಂದು ದೂರಿದರು.
ಬಿಜೆಪಿಗೆ ಹಿಂಸಾಚಾರ, ಕೋಮುದ್ವೇಷ ರಾಜಕೀಯ ಅಸ್ತ್ರವಾಗಿದೆ. ಆ ಕಾರಣಕ್ಕಾಗಿಯೇ ಮೂರು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅಲ್ಲಿ ಶಾಂತಿ ಮರಳುವಂತೆ ಮಾಡುವ ನಿಟ್ಟಿನಲ್ಲಿ ಒಂದೇ ಒಂದು ಪ್ರಯತವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಲಿಲ್ಲ. ಮೋದಿ ಅವರು ಅಲ್ಲಿನ ಜನರಿಗೆ ಶಾಂತಿ ಕಾಪಾಡಿ ಎಂದು ಹೇಳುವ ತಮ್ಮ ಕನಿಷ್ಠ ಕರ್ತವ್ಯವನ್ನೂ ಪಾಲಿಸಲಿಲ್ಲ ಎಂದು ದೂರಿದರು. ಸಂಘಟನೆ ಜಿಲ್ಲಾಧ್ಯಕ್ಷ ಇಮ್ರಾನ್, ಕಾರ್ಯದರ್ಶಿ ಖಲೀಂ, ಸಲೀಂ ಖಾನ್, ಜಿಲಾನ್, ಫೈರೋಜ್ ರಹಮಾನ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net