

ನವದೆಹಲಿ: ಮನುಷ್ಯನ ಜನನಕ್ಕೆ ವೀರ್ಯಾಣುಗಳು ಮುಖ್ಯ ಪಾತ್ರವಹಿಸುತ್ತವೆ. ಪುರುಷ ಮತ್ತು ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿ, ಇನ್ನು ಮುಂದೆ ಅವರ ಅಗತ್ಯವಿಲ್ಲದೆ ಮಕ್ಕಳು ಹುಟ್ಟಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಜೀವಂತ ಕೋಶವಿಲ್ಲದೆ ಮಾನವ ಕೃತಕ ಭ್ರೂಣವನ್ನು ರಚಿಸುವ ಮೂಲಕವಾಗಿ ಇಸ್ರೇಲ್ನ ವಿಜ್ಞಾನಿಗಳು ಪವಾಡ ಮಾಡಿದ್ದಾರೆ.
ಇಸ್ರೇಲಿನ ವೈಜ್ಮಾನ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳ ತಂಡವು ಅಂಡಾಣು ಮತ್ತು ವಿರ್ಯಾಣುವಿನ ಸಹಾಯವಿಲ್ಲದೇ ಭ್ರೂಣ ಮಾದರಿಯೊಂದನ್ನು ತಯಾರಿಸಿದೆ. ಇದು ವಿಜ್ಞಾನ ಲೋಕದಲ್ಲಿ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲಿದೆ. ವಿಜ್ಞಾನಿಗಳ ತಂಡ ತಯಾರಿಸಿರುವ ಈ ಮಾದರಿಯನ್ನು 14 ದಿನಗಳ ಇರಿಸಲಾಗಿತ್ತು. ಇದು ಮಾನವ ಭ್ರೂಣವನ್ನು ಹೋಲುತ್ತದೆ. ಭ್ರೂಣವನ್ನು ಪ್ರಾಯೋಗಲಯದಲ್ಲಿ ಬೆಳೆಸಿದ ಕಾಂಡ ಕೋಶಗಳಿಂದ(stell cells) ಸೃಷ್ಠಿಸಲಾಗಿದ್ದು, ಹಾರ್ಮೋನ್ ಕೂಡಾ ಬಿಡುಗಡೆ ಮಾಡುತ್ತಿವೆಯಂತೆ. ಅಂದ ಹಾಗೆ ಈ ಭ್ರೂಣ ಮಾದರಿಯನ್ನುಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ವೀರ್ಯ, ಅಂಡಾಣು ಅಥವಾ ಗರ್ಭಾಶಯವನ್ನು ಬಳಸಿಲ್ಲ ಎಂಬುದು ವಿಶೇಷವಾಗಿದೆ.
ಈ ಭ್ರೂಣದ ಮಾದರಿಯು ಜರಾಯು, ಹಳದಿ ಚೀಲ, ಕೊರಿಯಾನಿಕ್ ಚೀಲ ಮತ್ತು ಇತರ ಬಾಹ್ಯ ಅಂಗಾಂಶಗಳನ್ನು ಒಳಗೊಂಡು ವಿಶಿಷ್ಟವಾಗಿರುವ ರಚನೆಗಳು, ವಿಭಾಗಗಳನ್ನು ಹೊಂದಿದೆ. ಈ ಮಾದರಿಯ ಕ್ರಿಯಾತ್ಮಕ ಮತ್ತು ಅಗತ್ಯ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.
ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿದ ಸ್ಟೆಲ್ ಸೆಲ್‌ಗಳನ್ನು ಬಳಸಿಕೊಂಡು ಮಾನವ ಭ್ರೂಣದ ಮಾದರಿ ರಚಿಸಿದ್ದೇವೆ. ಅಷ್ಟೆ ಅಲ್ಲ, ಇದು ಗರ್ಭಾವಸ್ಥೆಯ ಪರೀಕ್ಷೆಯನ್ನು ಧನಾತ್ಮಕವಾಗಿ ಪರಿವರ್ತಿಸುವ ಹಾರ್ಮೋನನ್ನೂ ಬಿಡುಗಡೆ ಮಾಡಿತು. ಈ ಅಧ್ಯಯನವು ಮನುಷ್ಯ ಜೀವನದ ಆರಂಭಿಕ ಕ್ಷಣಗಳನ್ನು ಅರ್ಥಮಾಡಿಕೊಳ್ಳುವ ನೈತಿಕ ಮಾರ್ಗವನ್ನು ನೀಡುತ್ತದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಈ ಭ್ರೂಣ ಮಾದರಿಯ ಕುರಿತಾದ ಅಧ್ಯಯನ ಲೇಖನ ಈಗಾಗಲೇ ಖಾಸಗಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಗರ್ಭಪಾತ, ಗರ್ಭಧಾರಣೆಯ ವೈಫಲ್ಯ ಸೇರಿದಂದೆ ಹಲವು ಆಯಾಮಗಳನ್ನು ವೈದ್ಯಕೀಯ ದೃಷ್ಟಿಯಲ್ಲಿ ಅದ್ಯಯನ ನಡೆಸಲು ಪೂರಕವಾಗಲಿದೆ.