ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು!

Himalaya
Published on

ನವದೆಹಲಿ: ಜಪಾನ್​ನ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದಲ್ಲಿ ಪ್ರಾಚೀನ ಸಮುದ್ರದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.

ಸರಿಸುಮಾರು 600 ದಶಲಕ್ಷ ವರ್ಷಗಳ ಹಿಂದಿನ ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ತಂಡವು ಕಂಡುಹಿಡಿದಿದ್ದು ಈ ಸಂಧೋಧನೆ, ಭೂಮಿಯಲ್ಲಿ ಹಿಂದೆ ನಡೆದ ಮಹತ್ವದ ಆಮ್ಲಜನಕೀಕರಣ ಹಾಗೂ ಜೀವದ ಅಭಿವೃದ್ಧಿಯ ಘಟನೆಯ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.

ಈ ಅಧ್ಯಯನ, ಪ್ರಿಯಾಂಬ್ರಿಯನ್ ರಿಸರ್ಚ್​ನಲ್ಲಿ ಪ್ರಕಟಿಸಲಾಗಿದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೊನೇಟ್​ಗಳಿಂದ ಸಮೃದ್ಧವಾಗಿರುವ ಈ ಖನಿಜ ನಿಕ್ಷೇಪಗಳು "ಪ್ಯಾಲಿಯೊ ಸಾಗರ"ದ ಕಾಲಕ್ಕೆದ ಪಳೆಯುಳಿಕೆಗಳಿಗೆ ಹೋಲುತ್ತವೆ ಎಂದು ಬಹಿರಂಗಪಡಿಸುತ್ತದೆ. ಈ ಕುರಿತಾಗಿ ಸೆಂಟರ್ ಫಾರ್ ಅರ್ಥ್ ಸೈನ್ಸಸ್ ( CEaS ), IISc ಮತ್ತು ಅಧ್ಯಯನದ ಪ್ರಮುಖ ಲೇಖಕ ಪಿಎಚ್​ಡಿ ಪ್ರಕಾಶ್ ಚಂದ್ರ ಆರ್ಯ ಮಾಹಿತಿ ನೀಡಿದ್ದಾರೆ.

700 ರಿಂದ 500 ದಶಲಕ್ಷ ವರ್ಷಗಳ ಹಿಂದೆ, ಭೂಮಿಯು ಹಿಮದ ಉಂಡೆಯ ರೀತಿ ಇದ್ದು ದೀರ್ಘಕಾಲದ ಹಿಮಯುಗಕ್ಕೆ ಒಳಗಾಯಿತು ಎಂದು ವಿಜ್ಞಾನಿಗಳು ಸಿದ್ಧಾಂತ ವ್ಯಕ್ತಪಡಿಸಿದ್ದಾರೆ.

ಇದರ ನಂತರ ಎರಡನೇ ಗ್ರೇಟ್ ಆಕ್ಸಿಜನೀಕರಣ ಘಟನೆ ನಡೆದಿದ್ದು, ಈ ಸಂದರ್ಭ ವಾತಾವರಣದಲ್ಲಿ ಆದ ಆಮ್ಲಜನಕ ಮಟ್ಟದ ಹೆಚ್ಚಳ ಸಂಕೀರ್ಣ ಜೀವ ರೂಪಗಳ ವಿಕಾಸಕ್ಕೆ ಕಾರಣವಾಯಿತು. ಆದಾಗ್ಯೂ, ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಪಳೆಯುಳಿಕೆಗಳ ಕೊರತೆ ಹಾಗೂ ಪ್ರಾಚೀನ ಸಾಗರಗಳ ಕಣ್ಮರೆಯಿಂದಾಗಿ ಈ ಘಟನೆಗಳ ನಡುವಿನ ಸಂಪರ್ಕವು ಅಸ್ಪಷ್ಟವಾಗಿ ಉಳಿದಿದೆ.

ಇದೀಗ ಹಿಮಾಲಯದ ಮೇಲೆ ಪ್ರಾಚೀನ ಸಾಗರದ ಅವಶೇಷಗಳು ಸಿಕ್ಕಿರುವುದು ಭೂಮಿಯಲ್ಲಿ ಜೀವ ಹೇಗೆ ಅಭಿವೃದ್ಧಿ ಆಗಿದೆ ಎನ್ನುವ ಮಾಹಿತಿಯ ಕುರಿತಾಗಿ ಇನ್ನಷ್ಟು ಸಂಶೋಧನೆಗೆ ಅವಕಾಶ ಲಭಿಸಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net