More

    ಅಗತ್ಯಕ್ಕೆ ಅನುಸಾರವಾಗಿ ವಿಜ್ಞಾನಿಗಳು ಲಭಿಸುತ್ತಿಲ್ಲ

    ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ದೇಶದಲ್ಲಿ ವಿಜ್ಞಾನಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಶಾಸಕ ಕೆ. ಹರೀಶ್‌ಗೌಡ ಬೇಸರ ವ್ಯಕ್ತಪಡಿಸಿದರು.

    ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಸ್ರೋ, ಡಿಆರ್‌ಡಿಒ, ಸಿಎಫ್‌ಟಿಆರ್‌ಐನಂತಹ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳಿದ್ದರೂ ವಿಜ್ಞಾನಿಗಳು ಮಾತ್ರ ಅಗತ್ಯಕ್ಕೆ ಅನುಸಾರವಾಗಿ ಲಭಿಸುತ್ತಿಲ್ಲ. ಇಂತಹ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು.

    ಇಲ್ಲಿ ಸಿಗುವ ಅವಕಾಶ ಪಡೆದುಕೊಂಡು ಉನ್ನತ ವಿಜ್ಞಾನಿಗಳಾಗಬೇಕು. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜು ಅಗ್ರಸ್ಥಾನದಲ್ಲಿದೆ. ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದಂತಹ ಪ್ರತಿಭಾವಂತ ಹೆಣ್ಣು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.


    ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರ ಪೈಕಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೇ ಹೆಚ್ಚು. ನಿಮ್ಮ ಮೇಲೆ ಅಪಾರವಾದ ಭರವಸೆ ಇಟ್ಟು ಪಾಲಕರು ಕಳುಹಿಸಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಸ್ನಾತಕೋತ್ತರ ವ್ಯಾಸಂಗ ಪಡೆಯಬೇಕು. ಅನಗತ್ಯ ವಿಚಾರಗಳ ಕಡೆ ಗಮನ ಹಾಕುವುದೇ ಹೆಚ್ಚು. ಆದ್ದರಿಂದ ಅದ್ಯಾವುದಕ್ಕೂ ಅನುವು ಮಾಡಿಕೊಡದೆ ನಿಮ್ಮ ಗುರಿ ಕಡೆಗೆ ಹೆಚ್ಚು ಶ್ರಮ ವಹಿಸಬೇಕು ಎಂದು ಕಿವಿಮಾತು ಹೇಳಿದರು.

    ಪ್ರಾಂಶುಪಾಲ ಡಾ.ಡಿ. ರವಿ, ನಟಿ ಅದಿತಿ ಸಾಗರ್, ಸಾಂಸ್ಕೃತಿಕ ಸಂಚಾಲಕಿ ವನಿತಾ, ದೈಹಿಕ ಶಿಕ್ಷಣ ನಿದೇರ್ಶಕಿ ಡಾ. ಡಿ.ರಮಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts