

ಪ್ಯಾರಿಸ್: ಚಾರ್ಜಿಂಗ್ಗೆ ಇಡಲಾಗಿದ್ದ ಮೊಬೈಲ್ ಫೋನ್ ಸ್ನಾನ ಮಾಡುತ್ತಿದ್ದ ಶಾಲಾ ಬಾಲಕಿಯ ಎದೆಯ ಮೇಲೆ ಬಿದ್ದು, ಬಳಿಕ ನೀರಿನೊಳಗೆ ಜಾರಿದ ಪರಿಣಾಮದಿಂದ ಉಂಟಾದ ವಿದ್ಯುತ್ ಅವಘಡದಿಂದ ಬಾಲಕಿ ಸಾವಿಗೀಡಾಗಿರುವ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ.
ಶಾಲಾ ಬಾಲಕಿಯನ್ನು ಟಿಫ್ಫನ್(15) ಎಂದು ಗುರುತಿಸಲಾಗಿದ್ದು, ಮಾರ್ಸೈಲ್ನಲ್ಲಿರುವ ಮನೆಯಲ್ಲಿ ಕಳೆದ ಭಾನುವಾರ ಘಟನೆ ನಡೆದಿದೆ. ವಿದ್ಯುತ್ ಶಾಕ್ನಿಂದ ಬಳಲುತ್ತಿದ್ದ ಬಾಲಕಿಯನ್ನು ರಕ್ಷಿಸಲು ಸ್ಥಳೀಯ ಟಿಮೋನ್ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆ. ವಿದ್ಯುತ್ ಆಘಾತದಿಂದ ಉಸಿರಾಟದ ತೊಂದರೆಯಿಂದಾಗಿ ಬಾಲಕಿ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.
ಶಾಲಾ ಬಾಲಕಿ ಸ್ನಾನ ಮಾಡುತ್ತಿದ್ದಾಗ ಅವಳ ಸ್ಮಾರ್ಟ್ಫೋನ್ ಅನ್ನು ಸಮೀಪದಲ್ಲೇ ಚಾರ್ಜಿಂಗ್ ಇಟ್ಟಿದ್ದಳು. ಅದು ಆಕಸ್ಮಿಕವಾಗಿ ಎದೆಯ ಮೇಲೆ ಬಿದ್ದು, ನೀರಿನೊಳಗೆ ಜಾರಿದ್ದರಿಂದ ವಿದ್ಯುತ್ ಶಾಕ್ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೂ, ಸಾವಿಗೆ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಕೈಗೊಳ್ಳಲಾಗಿದೆ. (ಏಜೆನ್ಸೀಸ್)