ಈಜಲು ಹೋಗಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇನ್ನಿಲ್ಲ…

school students
Published on

ದೇವನಹಳ್ಳಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಸ್ನೇಹಿತರೊಂದಿಗೆ ಈಜಲು ಹೋಗಿ ಪ್ರಾಣ ಕಳೆದುಕೊಂಡ ದುರ್ಘಟನೆ ದೇವನ ಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಸತಿ ಶಾಲೆಯಲ್ಲಿ ಓದುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಶವವಾಗಿ ಹೊಂಡದಲ್ಲಿ ಪತ್ತೆಯಾಗಿದ್ದಾನೆ. ನೆನ್ನೆ ಸಂಜೆ ಜುನೇದ್ ಪಾಷ (14) ಎಂಬ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು ಇಂದು ಮತ್ತೆ ಮತ್ತೊರ್ವ ವಿದ್ಯಾರ್ಥಿ ಸಂತೋಷ್ (14) ಮೃತದೇಹ ಹೊಂಡದಲ್ಲಿ ಪತ್ತೆಯಾಗಿದೆ. ಮೃತ ಸಂತೋಷ್ ಹೊಸಕೋಟೆಯ ವಳಗೆರೆಪುರ ನಿವಾಸಿ

ಆಗಿದ್ದೇನು?
ನಿನ್ನೆ ಮೊರಾರ್ಜಿ ವಸತಿ ಶಾಲೆಯ ಆರೇಳು ವಿದ್ಯಾರ್ಥಿಗಳು ಹಾಸ್ಟೆಲ್ ಪಕ್ಕದ ಹೊಂಡದಲ್ಲಿ ಈಜಲು ತೆರಳಿದ್ದರು. ವಸತಿ ಶಾಲೆಯ ಮೆಲ್ವಿಚಾರಕನೊಬ್ಬ ವಿದ್ಯಾರ್ಥಿಗಳನ್ನ ಈಜಲು ಕರೆದುಕೊಂಡು ಹೋಗಿದ್ದ. ಈ ರೀತಿ ವಸತಿ ಶಾಲೆಯ ಬೇಜವ್ದಾರಿತನಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.

ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿದ್ದು, ಜಿಲ್ಲಾಧಿಕಾರಿಗಳು ತಾಲೂಕು ಆಡಳಿತ ಸ್ಥಳಕ್ಕೆ ಬರಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net