ಆನ್​ಲೈನ್​ನಲ್ಲಿ ಕ್ಲಾಸ್​ ನಡೆಸುವುದಾದ್ರೆ ಮಧ್ಯಾಹ್ನದ ಊಟ ಜೊಮ್ಯಾಟೋದಿಂದ ಬರುತ್ತಾ...!

Online Class
Published on

ಬೆಂಗಳೂರು: ಕರೊನಾ ವೈರಸ್​ ಮಹಾಮಾರಿಯಿಂದ ಜೀವನ ಶೈಲಿಯೇ ಏರುಪೇರಾಗಿದೆ. ಅಂದುಕೊಂಡಂಗೆ ನಡೆದಿದ್ದರೆ ಈಗಾಗಲೇ ಶಾಲೆ-ಕಾಲೇಜುಗಳು ಆರಂಭವಾಗಬೇಕಿತ್ತು. ಆದರೆ ಕರೊನಾ ಈವರೆಗೂ ಕಾಣೆಯಾಗದಿರುವುದು ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್​ ಹಾಕಿದೆ.

ಇದರ ನಡುವೆ ಶಾಲೆ-ಕಾಲೇಜು ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಕೆಲವರು ಕರೊನಾ ಹೋಗೋವರೆಗೂ ಶುರು ಮಾಡಬೇಡಿ ಎಂದಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಸರ್ಕಾರ ಆನ್​ಲೈನ್​ ತರಗತಿಗಳನ್ನು ಆರಂಭ ಮಾಡಿದ್ದು, ಪರ-ವಿರೋಧ ಚರ್ಚೆಯಾಗುತ್ತಲೇ ಇದೆ. ಇದನ್ನೂ ಓದಿ: ಮುತ್ತಪ್ಪ ರೈ ಆಸ್ತಿಯಲ್ಲಿ 2ನೇ ಪತ್ನಿಗೆ ಏನೇನು ಸಿಕ್ತು? ಆರಂಭವಾಗಲಿದೆಯಾ ಆಸ್ತಿ ವಿವಾದ?

ಚರ್ಚೆಯೇ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಆಸಕ್ತಿದಾಯ ಜೋಕ್ಸ್​ಗಳು ಹರಿದಾಡುತ್ತವೆ. ಅದರಲ್ಲೊಂದು ಹೀಗಿದೆ... "ಶಾಲೆಯ ಎಲ್ಲ ಕ್ಲಾಸ್ ಅನ್ನು ಆನ್​ಲೈನ್​ನಲ್ಲಿ ನಡೆಸುವುದಾದರೆ, ಮಧ್ಯಾಹ್ನದ ಬಿಸಿಯೂಟವನ್ನು ಜೊಮ್ಯಾಟೋದವರು ಕೊಡುತ್ತಾರಾ" ಎಂದು ಕೇಳಿದ್ದಾರೆ. ಸಮಯಕ್ಕೆ ತಕ್ಕ ಜೋಕ್ಸ್​ ಸೃಷ್ಟಿ ಮಾಡಿದವನ ಯೋಚನಾ ಲಹರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಲೇಜುಗಳ ಪುನರಾರಂಭ ಯಾವಾಗ?: ವಿದ್ಯಾರ್ಥಿಗಳ ಗೊಂದಲಕ್ಕೆ ಸಲಹಾ ಸಮಿತಿ ಅಧ್ಯಕ್ಷರ ಪರಿಹಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net