

ರಾಣೆಬೆನ್ನೂರ: ರಾಜ್ಯ ಸರ್ಕಾರ ಗೃಹಲಕ್ಷಿ$್ಮ ಯೋಜನೆಯಡಿ ನೀಡುತ್ತಿರುವ ಪ್ರತಿ ತಿಂಗಳ 2 ಸಾವಿರ ರೂ. ಹಣವನ್ನು ಬಹುತೇಕ ಮಹಿಳೆಯರು ವೈಯಕ್ತಿಕಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ಆ ಹಣವನ್ನು ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಮಹೇಶಪ್ಪ ಲಗುಬಿಗಿ ಶಾಲೆಗೆ ಗೃಹಲಕ್ಷಿ$್ಮ ಹಣ ನೀಡಿದವರು.
ಇವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗೃಹಲಕ್ಷಿ$್ಮ ಯೋಜನೆಯಿಂದ ಬಂದ 24 ಸಾವಿರ ರೂ.ಅನ್ನು ಶಾಲೆಯ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಿದ್ದಾರೆ.
ಸುಮಾರು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ತಮಗೆ ಬಂದಿರುವ ಗೃಹಲಕ್ಷಿ$್ಮ ಹಣವನ್ನು ಶಾಲಾ ಅಭಿವೃದ್ಧಿ ಸಮಿತಿಗೆ ನೀಡಿದ್ದಾರೆ.
ಇವರ ಮಾದರಿ ಕಾರ್ಯಕ್ಕೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕರಿಯಪ್ಪ ಕಂಬಳಿ, ಸದಸ್ಯರಾದ ಮಂಜುನಾಥ ತಳವಾರ, ಹನುಮಂತಪ್ಪ ಹಂಚಿನಮನಿ, ನಾಗೇಂದ್ರಪ್ಪ ನಡುವಿನಮನಿ, ಹಿರಿಯ ಶಿಕ್ಷಕ ಎಂ.ಎನ್. ಬಲ್ಲೂರ, ಪ್ರಭಾರಿ ಮುಖ್ಯಶಿಕ್ಷಕಿ ಅನ್ನರ್ಪೂಣ ಬಣಕಾರ ಸೇರಿ ಗ್ರಾಮಸ್ಥರು ದಂಪತಿಯನ್ನು ಸನ್ಮಾನಿಸಿದ್ದಾರೆ.