

ಮೂಗೂರು : ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೇ ಸಮಾಜಮುಖಿ ಚಟುವಟಿಕೆಗೂ ಮುಂದಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಹೇಳಿದರು.
ಮೂಗೂರು ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಬಾಲಕರ ಶಾಲೆಗೆ ಧರ್ಮಸ್ಥಳದ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಶುಕ್ರವಾರ 15 ಡೆಸ್ಕ್ ವಿತರಿಸಿ ಮಾತನಾಡಿದರು.
ಯಾವುದೇ ಒಂದು ಸಮುದಾಯ, ಗ್ರಾಮ ಪ್ರಗತಿಹೊಂದಲು ಅಲ್ಲಿನ ಶಾಲೆ, ಕೆರೆ, ದೇವಾಲಯ ಮತ್ತು ಕ್ರಿಯಾಶೀಲ ಸಮುದಾಯ ಬಹಳ ಮುಖ್ಯ. ಇವುಗಳ
ಅಭಿವೃದ್ಧಿಗೆ ದಾನಿಗಳು ಮತ್ತು ಸಂಘ -ಸಂಸ್ಥೆಗಳು ಕೈ ಜೋಡಿಸಬೇಕು ಎಂದರು. ಶಾಲಾ ಸಮಿತಿ ಹಾಗೂ ಶಿಕ್ಷಕ ವೃಂದವರಿಂದ ದಾನಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆ ಸಮಿತಿ ಉಪಾಧ್ಯಕ್ಷ ಎಂ. ಎನ್. ಸೋಮಣ್ಣ, ಪ್ರಭಾರ ಪ್ರಾಂಶುಪಾಲ ಮಹೇಶ್, ಉಪ ಪ್ರಾಂಶುಪಾಲ ಪುಟ್ಟಸ್ವಾಮಿ, ಶಾಲಾ ಸಮಿತಿ ಅಧ್ಯಕ್ಷ ಮಹೇಶ್, ಮೆಡಿಕಲ್ ಬಾಲು ಇತರರು ಹಾಜರಿದ್ದರು.