ಧಗ ಧಗನೆ ಹೊತ್ತಿ ಉರಿದ ಶಾಲಾ ಬಸ್​​; ಅದೃಷ್ಟವಶಾತ್ ಮಕ್ಕಳು ಸೇಫ್

bus
Published on

ವಿಜಯನಗರ: ಕೊಟ್ಟೂರು ಪಟ್ಟಣದ ಕೆ. ಅಯ್ಯನಹಳ್ಳಿ ಗ್ರಾಮದ ಬಳಿ ಶಾಲಾ ಬಸ್​​ಗೆ ಬೆಂಕಿ ಬಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾ​ಗಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಅಯ್ಯನಹಳ್ಳಿ ಬಳಿ ಚಲಿಸುತ್ತಿದ್ದ ಖಾಸಗಿ ಶಾಲೆಯ ಬಸ್​​ಗೆ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ತಗುಲಿದೆ. ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಮಕ್ಕಳನ್ನು ಬಸ್​​ನಿಂದ ಕೆಳಗಿಳಿಸಿದ್ದಾನೆ. ಈ ಅವಘಡದಿಂದ ಯಾವುದೇ ರೀತಿಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ.

ಅಗ್ನಿಶಾಮಕದಳದಿಂದ ಬೆಂಕಿ ನಂದಿಸೋ ಕಾರ್ಯ ನಡೆಯುತ್ತಿದೆ. ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net