ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆಗೆ ಜುಲೈ 31 ಕೊನೆ ದಿನ

PHD
Published on

ಬೆಂಗಳೂರು: ಬಹುತೇಕ ಎಲ್ಲಾ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ಕಾಣುತ್ತಾರೆ. ಆದರೆ ವಿದೇಶದಲ್ಲಿ ಅಧ್ಯಯನ ಮಾಡಲು ಹೆಚ್ಚು ವೆಚ್ಚ ತಗಲುವುದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗುವುದಿಲ್ಲ. ವಿಶೇಷವಾಗಿ ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಇದು ಇನ್ನಷ್ಟು ದುಸ್ತರ. ಪರಿಸ್ಥಿತಿ ಹೀಗಿರುವಾಗ ದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ಕನಸನ್ನು ನನಸಾಗಿಸಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯನ್ನು (NOS) ನಡೆಸುತ್ತಿದೆ. ಬನ್ನಿ ಹಾಗಾದರೆ ಈ ವಿದ್ಯಾರ್ಥಿವೇತನದ ಬಗ್ಗೆ ತಿಳಿಯೋಣ.

ಬುಡಕಟ್ಟು ವ್ಯವಹಾರಗಳ ಸಚಿವಾಲಯವು ನಡೆಸುತ್ತಿರುವ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನದ ಮೂಲಕ ಎಸ್‌ಟಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕೋರ್ಸ್‌ಗಳು, ಸಂಶೋಧನೆ ಅಂದರೆ ಪಿಎಚ್‌ಡಿಯಂತಹ ಕೋರ್ಸ್‌ಗಳಿಗೆ ವಿಶ್ವದಲ್ಲಿರುವ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡಬಹುದು. ಪ್ರತಿ ವರ್ಷ 20 ವಿದ್ಯಾರ್ಥಿಗಳಿಗೆ ಸಚಿವಾಲಯದಿಂದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅದರಲ್ಲಿ 3 ವಿದ್ಯಾರ್ಥಿವೇತನ ವಿಶೇಷವಾಗಿ PVTG ವಿದ್ಯಾರ್ಥಿಗಳಿಗೆ. ಅಲ್ಲದೆ, ಒಟ್ಟು ವಿದ್ಯಾರ್ಥಿವೇತನದ 30% ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಅರ್ಹತೆ
ವಿದೇಶಿ ಸಂಸ್ಥೆಗಳಲ್ಲಿ ಮೇಲ್ಕಂಡ ಕೋರ್ಸ್‌ ವ್ಯಾಸಂಗ ಮಾಡಬೇಕೆಂದು ಬಯಸುವವರು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಂಬಂಧಿತ ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾದರೆ ಮಾತ್ರ ವಿದ್ಯಾರ್ಥಿವೇತನ ನೀಡಲಾಗುತ್ತದೆ.

NOS ಗೆ ಅರ್ಜಿ ಸಲ್ಲಿಸುವುದು ಹೇಗೆ?
ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿರುವ ವಿಶೇಷ ಪೋರ್ಟಲ್ overseas.tribal.gov.in ನಲ್ಲಿ ಸಲ್ಲಿಸಬಹುದು. 2023-24 ನೇ ಸಾಲಿನ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜುಲೈ 31 ಕೊನೆಯ ದಿನಾಂಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net