ಉದೋಗ ಖಾತ್ರಿ ಯೋಜನೆಯ ನಿಗದಿತ ಕೆಲಸ ಮುಗಿಸಿದರೆ 316 ರೂ. ಕೂಲಿ ಪಕ್ಕಾ

narega
ದೇವದುರ್ಗ ತಾಲೂಕು ಬಿ.ಗಣೇಕಲ್ ಸಮೀಪದ ಬಂಗಾರಪ್ಪನ ಕೆರೆಯಲ್ಲಿ ಕೂಲಿಕಾರರ ಜತೆ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ಬಸಣ್ಣ ನಾಯಕ, ತಾಂತ್ರಿಕ ಸಹಾಯಕ ರಮೇಶ, ತಾಲೂಕು ಸಂಯೋಜಕ ಅಮರೇಶ, ವಿಜಯಕುಮಾರ, ರಾಘವೇಂದ್ರ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಎನ್.ಗಣೇಕಲ್ ಸಮೀಪದ ಬಂಗಾರಪ್ಪ ಕರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕೂಲಿಕಾರರ ಜತೆ ತಾಪಂ ವಿಶ್ವ ಕಾರ್ಮಿಕರ ದಿನ ಸೋಮವಾರ ಆಚರಿಸಿತು.

ಮೇ 10ರಂದು ಪ್ರತಿಯೊಬ್ಬರೂ ಮತದಾನ ಮಾಡಿ


ತಾಪಂ ಸಹಾಯಕ ನಿರ್ದೇಶಕ ಬಸಣ್ಣ ನಾಯಕ, ಕೇಕ್ ಕತ್ತರಿಸಿ ಕೂಲಿಕಾರರಿಗೆ ಸಿಹಿ ತಿನಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರ ಕೂಲಿ ಮೊತ್ತ ಹೆಚ್ಚಿಸಲಾಗಿದೆ. ನಿಗದಿತ ಕೆಲಸ ಮುಗಿಸಿದರೆ 316ರೂ. ಪಡೆಯಬಹುದು. ಮೇ 10ರ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡಬೇಕು ಎಂದರು.


ಸಂವಿಧಾನ 18ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನ ಹಕ್ಕನ್ನು ನೀಡಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಅರ್ಹರೆಲ್ಲರೂ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಸ್ವಯಂ ಪ್ರೇರಣೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.


ನಂತರ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಂತ್ರಿಕ ಸಹಾಯಕ ರಮೇಶ, ತಾಲೂಕು ಸಂಯೋಜಕ ಅಮರೇಶ, ವಿಜಯಕುಮಾರ, ರಾಘವೇಂದ್ರ ಹಾಗೂ ಕೂಲಿಕಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net