

ಪಿರಿಯಾಪಟ್ಟಣ: ತಾಲೂಕಿನ ಸರ್ಕಾರಿ ನೌಕರರ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಎಸ್.ಸಿ.ಪರಮಶಿವಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಆಂತರಿಕ ಒಪ್ಪಂದದಂತೆ ದೇವರಾಜ್ ರಾಜೀನಾಮೆ ನೀಡಿದ್ದರಿಂದ ತೆರವುಗೊಂಡ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ.ಪರಮಶಿವಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹರೀಶ್ ಅವರು ಎಸ್.ಸಿ.ಪರಮಶಿವಯ್ಯ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಹಂಗಾಮಿ ಅಧ್ಯಕ್ಷ ದೇವರಾಜ್, ನಿರ್ದೇಶಕರಾದ ಪಿ.ವಿ.ದೇವರಾಜ್, ಜಗದೀಶ್ ಆರಾಧ್ಯ, ಮಹೇಶ್, ರವಿಕುಮಾರ್, ಸುರೇಶ್, ಜಯಲಕ್ಷ್ಮೀ, ರೂಪಾ, ಎಚ್.ಕೆ.ಸುಮಂಗಳಾ, ನಾಗರಾಜ್, ಗಿರೀಶ್, ಶ್ಯಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ಶಿವಮೂರ್ತಿ, ಖಜಾಂಚಿ ಮಂಜುನಾಥ್, ನಿವೃತ್ತ ಶಿಕ್ಷಕರಾದ ನಟರಾಜು, ದಯಾನಂದ್, ಜಗದೀಶ್, ಕಾರ್ಯದರ್ಶಿ ರವಿಕುಮಾರ್, ಗಣೇಶ್ ಉಪಸ್ಥಿತರಿದ್ದರು.