ಸುಶಾಂತ್ ಅವರ ಮಾಜಿ ಮ್ಯಾನೇಜರ್ ಹತ್ಯೆ ಕುರಿತ ಪಿಐಎಲ್​ ವಿಚಾರಣೆ ವಾರ ಮುಂದಕ್ಕೆ

Disha Salian and Sushanth Singh
Published on

ನವದೆಹಲಿ: ಬಾಲಿವುಡ್​ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲ್ಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್​) ಯನ್ನು ಸುಪ್ರೀಂ ಕೋರ್ಟ್​ ಸೋಮವಾರ ಒಂದು ವಾರದ ಮಟ್ಟಿಗೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಈ ದಾವೆಯ ವಿಚಾರಣೆ ಕೈಗೆತ್ತಿಕೊಂಡಿತ್ತು.

ದಾವೆದಾರರ ಪರವಾಗಿ ಯಾರೂ ಹಾಜರಾಗದ ಕಾರಣ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದೆ. ಕಳೆದ ಬಾರಿಯೂ ಈ ದಾವೆಗೆ ಸಂಬಂಧಿಸಿ ಯಾರೂ ಹಾಜರಾಗಿರಲಿಲ್ಲ. ಕಳೆದ ಸಲವೇ ನಾವು ಈ ಪ್ರಕರಣವನ್ನು ಬಾಂಬೆ ಹೈಕೋರ್ಟ್​ನಲ್ಲಿ ನಡೆಸುವುದಕ್ಕೆ ಪರಿಗಣಿಸುವಂತೆ ದಾವೆದಾರರಿಗೆ ಸೂಚಿಸಿದ್ದೆವು. ಈಗ ನಾವೇನು ಮಾಡೋಣ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ಅಲ್ಲದೆ, ಒಂದು ವಾರದ ಮಟ್ಟಿಗೆ ವಿಚಾರಣೆಯನ್ನು ಮುಂದೂಡಿದೆ.

ವಕೀಲ ಪುನೀತ್ ಧಂಡಾ ಈ ದಾವೆಯನ್ನು ಹೂಡಿದ್ದು, ಸುಶಾಂತ್​ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸುತ್ತಮುತ್ತ ಅನೇಕ ವಿವಾದಗಳು, ಪಿತೂರಿಗಳು ನಡೆಯುತ್ತಿದ್ದು, ದಿಶಾ ಸಾಲ್ಯಾನ್​ ಸಾವಿನ ಪ್ರಕರಣವನ್ನು ಕೋರ್ಟ್​ ನಿಗಾದಲ್ಲಿ ನಡೆಸುವುದಕ್ಕೆ ಮನವಿ ಮಾಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net