

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಬಹುರಾಷ್ಟ್ರೀಯ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ಹಣಕಾಸು ಸೇವೆಗಳ ಶಾಸನಬದ್ಧ ಸಂಸ್ಥೆಯಾಗಿದೆ. ಇದು ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪ್ರಸ್ತುತ ಈ ಸಂಸ್ಥೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮಾ.4ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆ: 131
ಹುದ್ದೆಗಳ ವಿವರ
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ 1
ಸಹಾಯಕ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ) 23
ಉಪ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ) 51
ಮ್ಯಾನೇಜರ್ (ಭದ್ರತಾ ವಿಶ್ಲೇಷಕ) 3
ಸಹಾಯಕ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಭದ್ರತೆ) 3
ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) 50
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ/ಬಿಟೆಕ್, ಎಂಎಸ್ಸಿ, ಐಟಿ/ಎಂಸಿಎ, ಎಂಟೆಕ್, ಸಿಎ, ಸಿಎ್ಎ, ಐಸಿಡಬ್ಲ್ಯುಎ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಎಂಎಂಎಸ್/ ತತ್ಸಮಾನ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕೆಲಸದ ಅನುಭವ ಹೊಂದಿರಬೇಕು.
ಹುದ್ದೆ ವಯೋಮಿತಿ ವೇತನ
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ 60 24,50,000
ಸಹಾಯಕ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ) 30 36,000-63,840
ಉಪ ವ್ಯವಸ್ಥಾಪಕ (ಭದ್ರತಾ ವಿಶ್ಲೇಷಕ) 35 48,170-69,810
ಮ್ಯಾನೇಜರ್ (ಭದ್ರತಾ ವಿಶ್ಲೇಷಕ) 38 63,840-78,230
ಸಹಾಯಕ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಭದ್ರತೆ) 42 89,890-1,00,350
ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) 25-35 63,840-78,230
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮಾನುಸಾರ ವಯೋಸಡಿಲಿಕೆ ಅನ್ವಯಾಗಲಿದೆ.
ಅರ್ಜಿಶುಲ್ಕ
ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ. ಜನರಲ್/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳಿಗೆ 750ರೂ. ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ
ಶಾರ್ಟ್ ಲಿಸ್ಟ್, ಸಂವಹನ ಮತ್ತು ಸಂದರ್ಶನದ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 04-03-2024