'ಹಲೋ' ಬದಲು 'ಜೈ ಕಿಸಾನ್' ಎನ್ನಲು ಕೃಷಿ ಇಲಾಖೆ ಸೂಚನೆ

Vidhan Soudha 9 June 20
Published on

ಬೆಂಗಳೂರು: ಕೃಷಿ ಸಚಿವರು, ಕೃಷಿ ವಿದ್ಯಾರ್ಥಿಗಳು, ಕೃಷಿ ಅಧಿಕಾರಿಗಳು ವಿಜ್ಞಾನಿಗಳು ಇನ್ನು ಮುಂದೆ ತಮ್ಮ ದೂರವಾಣಿ / ಮೊಬೈಲ್ ಕರೆ ಮಾಡುವಾಗ ಅಥವಾ ಸ್ವೀಕರಿಸುವಾಗ ಹಲೋ ಎಂದು ಹೇಳುವ ಬದಲು ಜೈ - ಕಿಸಾನ್ ಎಂಬ ಪದ ಬಳಸಬೇಕೆಂದು ಕೃಷಿ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಅನ್ನದಾತರ ಮಹತ್ವವನ್ನು ಸಾರಲು ಮತ್ತು ರೈತರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಹಾಗೂ ರೈತರ ವಿಶ್ವಾಸ ಹೆಚ್ಚಿಸಲು ಇದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಈ ಮೇಲೆ ತಿಳಿಸಿದ ಎಲ್ಲರೂ ದೂರವಾಣಿ/ ಮೊಬೈಲ್ ಉಪಯೋಗಿಸುವಾಗ ಹಲೋ ಬದಲಿಗೆ ಜೈ- ಕಿಸಾನ್ ಪದ ಬಳಸಬೇಕು ಹಾಗೂ ತಮ್ಮ ಅಧೀನದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಬೇಕೆಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net