

Ganguly: ಪುರಿ ಸಮುದ್ರದಲ್ಲಿ ಶನಿವಾರ ಸಂಜೆ ಜಲ ಕ್ರೀಡೆಯ ಸಮಯದ ವೇಳೆ ದೋಣಿಯೊಂದು ಮಗುಚಿ ಬಿದ್ದಿದ್ದು, ಬೋಟ್ನಲ್ಲಿದ್ದ ಭಾರತೀಯ ಕ್ರಿಕೆಟ್ನ ಮಾಜಿ ಆಟಗಾರ ಸೌರವ್ ಗಂಗೂಲಿ ಹಿರಿಯ ಸಹೋದರ ಮತ್ತು ಅವರ ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬೋಟ್ ಮುಳುಗಿದ ತಕ್ಷಣ ಎಚ್ಚೆತ್ತ ಜೀವರಕ್ಷಕ ಸಿಬ್ಬಂದಿ(Lifeguard) ಕೂಡಲೇ ಅವರನ್ನು ರಕ್ಷಿಸಿದ್ದಾರೆ. ದೋಣಿ ಮೊಗಚಿ ಬಿದ್ದ ದೃಶ್ಯಗಳು ಸೋಮವಾರ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆದ ಬಳಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪುರಿ ಜಿಲ್ಲಾಡಳಿತ ಇದೀಗ ತನಿಖೆ ಆಂಭಿಸಿದೆ.
ಅಪಘಾತದ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದೇವೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ತಿಳಿಸಿದ್ದಾರೆ.
''ನಾನು ಇನ್ನು ಅಪಘಾತದಲ್ಲಿದ್ದೇನೆ. ಇದು ತುಂಬಾ ಅದೃಷ್ಟದಿಂದ ಪಾರಾಗಿದ್ದೇವೆ. ಕೂಡಲೇ ನಮ್ಮ ರಕ್ಷಣೆ ಬಂದ ಜೀವರಕ್ಷರಿಗೆ ಧನ್ಯವಾದಗಳು'' ಎಂದು ಗಂಗೂಲಿ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ಹೇಳಿದ್ದಾರೆ.
"ಒಂದು ಕ್ಷಣ, ಇದು ಅಂತ್ಯ ಎಂದು ನಾವು ಭಾವಿಸಿದೆವು. ಜಗನ್ನಾಥ ದೇವರು ನಮ್ಮನ್ನು ರಕ್ಷಿಸಿದನು. ದೋಣಿ ನಿರ್ವಾಹಕರಿಗೆ ಮಾನ್ಯ ಪರವಾನಗಿ ಇದೆ ಎಂದು ಸರ್ಕಾರ ನಿರ್ಧರಿಸಬೇಕು. ಜಲ ಚಟುವಟಿಕೆಗಳಲ್ಲಿ ಸುರಕ್ಷತೆಯು ಆದ್ಯತೆಯಾಗಿರುತ್ತದೆ" ಎಂದು ಸ್ನೇಹಶಿಶ್ ಗಂಗೂಲಿ ಪತ್ನಿ ಅರ್ಪಿತಾ ಭಯಾನಕ ಕ್ಷಣವನ್ನು ವಿವರಿಸಿದರು.(ಏಜೆನ್ಸೀಸ್)