ಧರ್ಮ ರಕ್ಷಣೆಗಾಗಿ ಶ್ರೀ ರೇಣುಕಾಚಾರ್ಯರು ಜನ್ಮದಾಳಿದವರು; ಶಿವಯೋಗೇಶ್ವರ ಸ್ವಾಮೀಜಿ

24-RNR-06
Published on

ಸವಣೂರ: ಶಿವನ ಆಜ್ಞೆಯಂತೆ ಧರ್ಮದ ರಕ್ಷಣೆಗಾಗಿ ಭೂಲೋಕದಲ್ಲಿ ರೇಣುಕಾಚಾರ್ಯರು ಜನ್ಮತಾಳಿದರು ಎಂದು ರಾಣೆಬೆನ್ನೂರ ತಾಲೂಕಿನ ಗುಡ್ಡದಆನ್ವೇರಿಯ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಜೇಕಿನಕಟ್ಟಿ ಗ್ರಾಮದ ಹುತ್ತಮಲ್ಲೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಶ್ರೀ ರೇಣುಕಾಚಾರ್ಯ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕಲಿಯುಗದಲ್ಲಿ ವೀರಶೈವ ಧರ್ಮವನ್ನು ಬೋಧಿಸಲು ಬಂದ ಐವರು ಆಚಾರ್ಯರಲ್ಲಿ ರೇಣುಕಾಚಾರ್ಯರು ಒಬ್ಬರು. ಅವರು ಸೋಮೇಶ್ವರ ಲಿಂಗದಲ್ಲಿ ಜನಸಿದರು ಎಂದು ಹೇಳಲಾಗುತ್ತದೆ. ವೀರಶೈವ ಧರ್ಮವನ್ನು ತಿಳಿಸಲು ಭಾರತದಾದ್ಯಂತ ಸಂಚರಿಸಿದರು. ಜಂಗಮಕುಲಕ್ಕೆ ಜೋಳಿಗೆ ಕಾಯಕ ಕೊಟ್ಟ ಮೂಲಪುರುಷರಾಗಿದ್ದಾರೆ. ಅಗಸ್ತ್ಯ ಮುನಿಗೆ ಶಿವಸಿದ್ದಾಂತವನ್ನು ಬೋಧಿಸಿದ್ದರು. ವೀರಶೈವ ಧರ್ಮ ಉದ್ದಾರಕರು ಎಂದರು.
ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿಯ ಹನುಮಂತಪ್ಪ ಸಂಗೀತ ಪ್ರಸ್ತುತ ಪಡಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಮುಖರಾದ ಚನ್ನಬಸಯ್ಯ ಪ್ರಭಯ್ಯನವರಮಠ, ದ್ಯಾಮಣ್ಣ ಬಿಳಸೂರ, ಗದಿಗೆಪ್ಪಗೌಡ ಅಯ್ಯನಗೌಡ್ರ, ಮಲ್ಲಯ್ಯ ಚರಂತಿಮಠ, ಶಿವಪುತ್ರಪ್ಪ ಕುಂದಗೋಳ, ಶಿವಲಿಂಗಪ್ಪ, ಗಂಗಾಧರ ಮಹಾಂತಶೆಟ್ಟರ್, ಮಲ್ಲೇಶಪ್ಪ ದೇಸೂರ, ಬಾಪುಗೌಡ ನಾಗರಾಜಗೌಡ್ರ, ಶಂಭುಲಿಂಗ ಹಿರೇಮಠ, ಬಸವಣ್ಣಯ್ಯ ಪ್ರಭಯ್ಯನವರಮಠ, ಈರಣ್ಣ ಬೆಳವಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net