ಪ್ರಾಣವಾಯು ನೀಡಿದ ಸೌದಿ ಅರೇಬಿಯಾ !

oxyg
Published on

ರಿಯಾಧ್/ನವದೆಹಲಿ : ಭಾರತದಲ್ಲಿ ಕರೊನಾದಿಂದಾಗಿ ಉಂಟಾಗಿರುವ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ನೀಗಿಸಲು ಭಾರತ ಸರ್ಕಾರ ಅನ್ಯ ದೇಶಗಳ ಸಹಾಯವನ್ನೂ ಪಡೆಯಲು ಮುಂದಾಗಿದೆ. ಸಿಂಗಪೂರ್ ಸೇರಿದಂತೆ ಹಲವು ವಿದೇಶಗಳಿಂದ ಸಂಕಷ್ಟದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಗೆ ಸೇನಾ ವಿಮಾನಗಳನ್ನು, ರೈಲುಗಳನ್ನು ಬಳಸಿ ಆಕ್ಸಿಜನ್ ಪೂರೈಸಲಾಗುತ್ತಿದೆ.

ಇಂಥದೇ ಒಂದು ಸಹಾಯವನ್ನು ಸೌದಿ ಅರೇಬಿಯಾ ಆಡಳಿತ ಮಾಡುತ್ತಿದೆ. ರಿಯಾಧ್​ನಲ್ಲಿರುವ ಭಾರತೀಯ ಎಂಬೆಸಿಯು ನಿನ್ನೆ ಅದಾನಿ ಗುಂಪು ಮತ್ತು ಲಿಂಡೆ ಕಂಪೆನಿಯ ಸಹಕಾರದೊಂದಿಗೆ 80 ಮೆಗಾ ಟನ್​ ಲಿಖ್ವಿಡ್ ಆಕ್ಸಿಜನ್​ಅನ್ನು ಹಡಗಿನ ಮೂಲಕ ಭಾರತಕ್ಕೆ ರವಾನಿಸಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಎಂಬೆಸಿ, ಸೌದಿ ಅರೇಬಿಯಾದ ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸಿದೆ.

ಪಾಕಿಸ್ತಾನವೂ ಸೇರಿದಂತೆ ಹಲವು ದೇಶಗಳು ಭಾರತಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಅಮೆರಿಕಾದ ಉನ್ನತ ಅಧಿಕಾರಿಗಳು ಭಾರತ ಸರ್ಕಾರಕ್ಕೆ ಮತ್ತು ದೇಶದ ವೈದ್ಯಕೀಯ ಸಮುದಾಯಕ್ಕೆ ಹೆಚ್ಚಿನ ಬೆಂಬಲ ಒದಗಿಸಲು 'ಸಕ್ರಿಯ' ಮಾತುಕತೆಗಳು ನಡೆಯುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net