

Ban Children Hajj: ಸೌದಿ ಅರೇಬಿಯಾ ಸರ್ಕಾರ ಇದೀಗ ''ಹಜ್ ಯಾತ್ರೆಗೆ ಮಕ್ಕಳ ನಿಷೇಧ'' ಕಾನೂನು ಜಾರಿ ಮಾಡಿದೆ. ಹಜ್ ಯಾತ್ರೆಯ ಬಗ್ಗೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಯಾತ್ರೆಗೆ ಮಕ್ಕಳನ್ನು ಕರೆತರದಂತೆ ನಿಷೇಧ ಹೇರಿದೆ ಎಂದು ವರದಿಯಾಗಿದೆ.
ಹಜ್ ಸಮಯದಲ್ಲಿ ಭಾರಿ ಪ್ರಮಾಣದ ಜನಸಂಖ್ಯೆ ಬರುತ್ತಿರುವುದರಿಂದ ಯಾವುದೇ ಅಹಿತಕ ಘಟನೆ(ಕಾಲ್ತುಳಿತ) ನಡೆಯದಂತೆ ನೋಡಿಕೊಳ್ಳಲು ಮತ್ತು ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಹೊಸ ಕಾನೂನು ಜಾರಿ ಮಾಡಲಾಗಿದೆ ಎಂದು ಸೌದಿ ಅರಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
2025ರ ಹಜ್ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಈ ಬಾರಿ ಯಾತ್ರೆಗೆ ಬರುವವರಿಗೆ ಮಾತ್ರ ಇದು ಅನ್ವಹಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಹಜ್ ಮತ್ತು ಉಮ್ರಾಕ್ಕೆ ಸಂಬಂಧಿಸಿದ ತಮ್ಮ ನಿಯಮಗಳನ್ನು ಸೌದಿ ಸರ್ಕಾರ ಅಗ್ಗಾಗೆ ಬದಲಾಯಿಸುತ್ತಲೇ ಇದೆ. 2024ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸೀದಿ ಬಳಿ ಜನ ಸಂದಣಿ ಇದ್ದ ಕಾರಣ ಛಾಯಚಿತ್ರ ತೆಗೆಯದಂತೆ ನಿಷೇಧ ಹೇರಿತ್ತು.(ಏಜೆನ್ಸೀಸ್)