ಚಿಕ್ಕಬಳ್ಳಾಪುರ: ವಿದ್ಯೆ, ಆರೋಗ್ಯ ಮತ್ತು ಆಹಾರ ಮಾನವನ ಮೂಲ ಹಕ್ಕುಗಳಾಗಬೇಕು. ಇವನ್ನು ವ್ಯಾಪಾರೀಕರಣದ ವ್ಯವಸ್ಥೆಯಿಂದ ತಪ್ಪಿಸಬೇಕು ಎಂಬುದಾಗಿ ಪ್ರತಿಪಾದಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯತಾ ಸೇವಾ ಅಭಿಯಾನವನ್ನು ಕೈಗೊಂಡಿದ್ದಾರೆ. ಸತ್ಯಸಾಯಿ ಸಂಸ್ಥೆಯು ತ್ರಿವಿಧ ಸೇವಾ ಕಾರ್ಯದ ಕೇಂದ್ರ ಸ್ಥಾನವಾಗಿಸಿ, ಜಾಗತಿಕ ಮಟ್ಟದಲ್ಲಿ ಮೌನ ಕ್ರಾಂತಿಯನ್ನು ನಡೆಸುತ್ತಿದ್ದಾರೆ.
ದೇಶದಾದ್ಯಂತ ೩೦ ಶಿಕ್ಷಣ ಸಂಸ್ಥೆಗಳು ವಸತಿ ಮತ್ತು ಇತರ ಸಮಗ್ರ ವ್ಯವಸ್ಥೆಗಳೊಂದಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿವೆ. ಹಾಗೆಯೇ ಮಕ್ಕಳು, ಮಹಿಳೆಯರ ಆರೋಗ್ಯ ವರ್ಧನೆಗಾಗಿ ಪೌಷ್ಟಿಕ ಪೂರ್ಣ ದ್ರಾವಕವನ್ನು ಒದಗಿಸಲಾಗುತ್ತಿದೆ. ಇದರ ನಡುವೆ ಆರೋಗ್ಯ ಸೇವಾ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಒಂದು ಸವಾಲಾಗಿದೆ. ಆರೋಗ್ಯ ತಪಾಸಣೆ, ಔಷಧೋಪಚಾರ ಮತ್ತು ಚಿಕಿತ್ಸೆಯು ವ್ಯಾಪಾರೀಕರಣಗೊಂಡಿವೆ. ಬಹುತೇಕ ಬಡವರು, ಅದರಲ್ಲೂ ಗ್ರಾಮೀಣ ಜನರಿಗೆ ಸೇವೆಯು ಗಗನ ಕುಸುಮವೇ ಆಗಿದೆ. ಇದನ್ನರಿತು ಸದ್ಗುರುಗಳು ಉಚಿತ ವೈದ್ಯಾಲಯಗಳನ್ನು ದೇಶವಿದೇಶಗಳಲ್ಲಿ ಸ್ಥಾಪಿಸಿದ್ದಾರೆ.
*ವೈದ್ಯಕಿಯ ತಂತ್ರಾAಶಕ್ಕೆ ಚಾಲನೆ
ಮುದ್ದೇನಹಳ್ಳಿಯ ಮಧುಸೂಧನ ಸಾಯಿ ವೈದ್ಯಕಿಯ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎ.ಆರ್ ರಘುಪತಿ ಇಂಟಲಿಜೆAಟ್ ಹೆಲ್ತ್ ರಿಸ್ಕ್ ಅಸೆಸ್ಮೆಂಟ್' ಎಂಬ ನೂತನ ವೈದ್ಯಕಿಯ ಸಾಧನ' ತಂತ್ರಾAಶಕ್ಕೆ ಚಾಲನೆ ನೀಡಿದರು.
ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ದೇಹದಲ್ಲಿ ಅಧಿಕ ಕೊಬ್ಬಿನಾಂಶದಿAದ ತಲೆದೋರುವ ಸಮಸ್ಯೆಗಳನ್ನು ಪತ್ತೆ ಹಚ್ಚಲು ಅರ್ಕ ಕಂಪೆನಿಯು ತಂತ್ರಾAಶವನ್ನು ಅಭಿವೃದ್ಧಿಪಡಿಸಿದೆ. ಇದು ವ್ಯಕ್ತಿಗಳ ಕಾಯಿಲೆಗಳನ್ನು ಶೀಘ್ರವಾಗಿ, ನಿಖರ ಹಾಗೂ ಸುಲಭವಾಗಿ ಕಂಡು ಹಿಡಿಯಲು ನೆರವಾಗಲಿದೆ ಎಂದು ಸಂಸ್ಥೆ ಹೇಳಿದೆ.