

ಸತೀಶ್ ಜಾರಕಿಹೊಳೆ ಗಡಿಪಾರಿಗೆ ಡಾ.ಬಿ.ಸಿ. ನವೀನ್‌ಕುಮಾರ್ ಆಗ್ರಹ
ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮೇಲೆ ಘಟಪ್ರಭಾದಲ್ಲಿ ನಡೆದಿರುವ ಹಲ್ಲೆ ಯತ್ನವನ್ನು ತೀವ್ರವಾಗಿ ಖಂಡಿಸು ತ್ತೇವೆಂದು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ. ನವೀನ್‌ಕುಮಾರ್ ಹೇಳಿದ್ದಾರೆ.
ಪರಿವಾರವಾದ ಮತ್ತು ಭ್ರಷ್ಟಾಚಾರ ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿರುವ ವಿಚಾರವಾದಿ ಎಂಬ ಮುಖವಾಡ ಧರಿಸಿರುವ ಸತೀಶ್ ಜಾರಕಿಹೊಳಿ ದಲಿತ ಸಂಘಟನೆ ಹೆಸರಿನಲ್ಲಿ ರಾಜ್ಯಸಭೆ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದಿರುವ ಸತೀಶ್ ಜಾರಕಿಹೊಳಿ ಅಂತಹ ವ್ಯಕ್ತಿಗಳು ಮುಗ್ಧ ದಲಿತ ಮುಖಂಡರನ್ನು ಬಳಸಿಕೊಂಡಿದ್ದಾರೆ. ಇದು ದಲಿತರಿಗೆ ಮಾಡಿರುವ ಅಪಮಾನ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಪ್ರತಿಭಟನೆ ಜನಪರವಾಗಿರಬೇಕು. ಆದರೆ, ದ್ವೇಷ ಸಾಧನೆಗೊಸ್ಕರ ಬಳಸಿ ಕೊಂಡಿರುವುದು ಜಾರಕಿಹೊಳೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ತಮ್ಮ ಮನಸ್ಥಿತಿಯನ್ನು ಸರಿ ಪಡಿಸಿಕೊಳ್ಳದಿದ್ದರೆ ಕರ್ನಾಟಕ ರಾಜ್ಯದಲ್ಲಿ ಸತೀಶ್ ಜಾರಕಿಹೊಳೆ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ. ಹಿಂದೂಸ್ಥಾನದಲ್ಲಿ ಹುಟ್ಟಿ ಹಿಂದೂ ಸ್ಥಾನದ ಸರ್ವಸ್ವವನ್ನೂ ಪಡೆದಿರುವ ಈ ವ್ಯಕ್ತಿ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇಂತಹ ವ್ಯಕ್ತಿಗಳನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ಧಾರೆ.