ಡೈಮಂಡ್​ ಲೀಗ್​ನಲ್ಲಿ ಸರ್ವೇಶ್​ ಕುಶಾರೆ ಇತಿಹಾಸ; ನೀರಜ್​ ಚೋಪ್ರಾ, ವಿಕಾಸ್​ ಗೌಡ ಸಾಲಿಗೆ ಸೇರ್ಪಡೆ!

ಡೈಮಂಡ್​ ಲೀಗ್​ನಲ್ಲಿ ಸರ್ವೇಶ್​ ಕುಶಾರೆ ಇತಿಹಾಸ; ನೀರಜ್​ ಚೋಪ್ರಾ, ವಿಕಾಸ್​ ಗೌಡ ಸಾಲಿಗೆ ಸೇರ್ಪಡೆ!
ಡೈಮಂಡ್​ ಲೀಗ್​ನಲ್ಲಿ ಸರ್ವೇಶ್​ ಕುಶಾರೆ ಇತಿಹಾಸ; ನೀರಜ್​ ಚೋಪ್ರಾ, ವಿಕಾಸ್​ ಗೌಡ ಸಾಲಿಗೆ ಸೇರ್ಪಡೆ!
Published on
ಮೊನಾಕೊ: ಮಹಾರಾಷ್ಟ್ರದ ಸರ್ವೇಶ್​ ಕುಶಾರೆ ಡೈಮಂಡ್​ ಲೀಗ್​ನಲ್ಲಿ ಪೋಡಿಯಂ ಫಿನಿಶ್​ ಕಂಡ ಮೊದಲ ಭಾರತೀಯ ಹೈಜಂಪರ್​ ಎನಿಸಿದ್ದಾರೆ. ಅವರು ಪದಾರ್ಪಣೆಯ ಡೈಮಂಡ್​ ಲೀಗ್​ನಲ್ಲೇ (Diamond League) ಈ ಸಾಧನೆ ಮಾಡಿದ್ದಾರೆ. ಜತೆಗೆ ಡೈಮಂಡ್​ ಲೀಗ್​ನಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆದ 4ನೇ ಭಾರತೀಯರೆನಿಸಿದ್ದಾರೆ.

31 ವರ್ಷದ ಸರ್ವೇಶ್​ ಶುಕ್ರವಾರ ನಡೆದ ಮೊನಾಕೊ ಡೈಮಂಡ್​ ಲೀಗ್​ನಲ್ಲಿ 2.26 ಮೀ. ಎತ್ತರ ಜಿಗಿಯುವ ಮೂಲಕ 3ನೇ ಸ್ಥಾನ ಪಡೆದರು. ಅವರು 2 ವಾರಗಳ ಹಿಂದಷ್ಟೇ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ 2.31 ಮೀ.ಗಳ ರಾಷ್ಟ್ರೀಯ ದಾಖಲೆ ಬರೆದಿದ್ದರು.

ಜಾವೆಲಿನ್​ ತಾರೆ ನೀರಜ್​ ಚೋಪ್ರಾ (2022ರಿಂದ 13 ಬಾರಿ), ಲಾಂಗ್​ಜಂಪ್​ ಪಟು ಮುರಳಿ ಶ್ರೀಶಂಕರ್​ (2023) ಮತ್ತು ಮಾಜಿ ಡಿಸ್ಕಸ್​ ಥ್ರೋ ಪಟು ವಿಕಾಸ್​ ಗೌಡ (2015ರಿಂದ 2 ಬಾರಿ) ಡೈಮಂಡ್​ ಲೀಗ್​ನಲ್ಲಿ ಪೋಡಿಯಂ ಫಿನಿಷ್​ ಕಂಡಿದ್ದ ಹಿಂದಿನ ಭಾರತೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net