

ಪ್ರಶ್ನೆ: ನನ್ನ ತಂದೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ನನ್ನ ತಾಯಿ ನಿಧರಾಗಿದ್ದಾರೆ. ಅಲ್ಲದೆ ನನ್ನ ಗಂಡ ಕೂಡ ನಿಧನರಾಗಿರುವ ಕಾರಣ ಎರಡು ಮಕ್ಕಳ ಸಹಿತ ತಂದೆ ಜತೆಯಲ್ಲೇ ವಾಸವಾಗಿದ್ದೇನೆ. ಹಾಗಾಗಿ ನನ್ನ ತಂದೆಯವರ ಮರಣಾನಂತರ ಪಿಂಚಣಿ ಸೌಲಭ್ಯವು ವಿಧವೆಯಾದ ನನಗೆ ಸಿಗುವುದೇ?
| ಸುನೀತಾ, ಹನೂರು, ಚಾಮರಾಜನಗರ ಜಿಲ್ಲೆ
ಉತ್ತರ: 2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿಯ ನಿಯಮ 9(ಡಿ) ರಂತೆ, ಸರ್ಕಾರಿ ನೌಕರನ ಮಕ್ಕಳು ಮಾನಸಿಕ ಅಸ್ವಸ್ಥತೆ ಅಥವಾ ಕುರುಡತನ ಸೇರಿ ದೈಹಿಕ ಅಂಗವಿಕಲರಾಗಿದ್ದು, ಕೆಲಸಮಾಡಿ ಜೀವನೋಪಾಯ ಸಾಗಿಸಲು ಅಸಮರ್ಥರಾಗಿದ್ದಲ್ಲಿ ಅಂಥವರಿಗೆ ಕುಟುಂಬ ಪಿಂಚಣಿಯು ನಿವೃತ್ತ ನೌಕರನ ನಿಧನದ ನಂತರ ಲಭ್ಯವಾಗುತ್ತದೆ. ಆದರೆ, ವಿಧವಾ ಪುತ್ರಿಗೆ 18 ವರ್ಷ ವಯಸ್ಸಿನ ನಂತರ ಪಿಂಚಣಿ ಲಭ್ಯವಾಗಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.