

ಪ್ರಶ್ನೆ: ನನ್ನ ಸಂಬಂಧಿಕರೊಬ್ಬರು ಪ್ರೌಢಶಾಲಾ ಶಿಕ್ಷಕರಾಗಿ 15 ವರ್ಷಗಳಾಯಿತು. ಅವರು ಈ ಮಧ್ಯೆ ಮೂರು ತಿಂಗಳು ವೈದ್ಯಕಿಯ ಕಾರಣಗಳಿಂದಾಗಿ ವೇತನ ರಹಿತ ರಜೆ ಪಡೆದಿದ್ದರು. ಆದರೆ ಶಿಕ್ಷಣ ಇಲಾಖೆ ಈ ರಜೆ ಪರಿಗಣಿಸದೇ 15 ವರ್ಷದ ಕಾಲಮಿತಿ ಬಡ್ತಿಯನ್ನು ಮೂರು ತಿಂಗಳು ಮುಂದೂಡಿದ್ದಾರೆ. ಇದು ಸರಿಯೇ?
ಪ್ರಸನ್ನಕುಮಾರ್, ಮೈಸೂರು
ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 53 (ಬಿ)ರಂತೆ ವೈದ್ಯಕಿಯ ಕಾರಣಗಳಿಂದ ಯಾವುದೇ ರಜೆಯನ್ನು ಬಳಸಿಕೊಂಡರೆ ವೇತನ ಬಡ್ತಿಗಳನ್ನು ಮುಂದೂಡುವಂತಿಲ್ಲ. ಎಲ್ಲ ಬಗೆಯ ರಜೆಗಳು ಕರ್ತವ್ಯವೆಂದು ಪರಿಗಣಿತವಾಗುವುದರಿಂದ ಈ 15 ವರ್ಷದ ಕಾಲಮಿತಿ ಬಡ್ತಿಯನ್ನು ಮುಂದೂಡುವ ಕ್ರಮ ಸರಿಯಲ್ಲ. ಆದ್ದರಿಂದ 1991ರ ಕರ್ನಾಟಕ ಸರ್ಕಾರಿ ಸೇವಾ (ಸ್ವಯಂಚಾಲಿತ ವೇತನ ಬಡ್ತಿ) ನಿಯಮಾವಳಿಯ ನಿಯಮ 3 ರಂತೆ 15 ವರ್ಷ ಪೂರೈಸಿದ ದಿನಾಂಕದಂದು ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.