

ಪ್ರಶ್ನೆ: ನಾನು, 2012ರ ಮಾ.1ರಿಂದ ಕಾರಾಗೃಹ ಇಲಾಖೆಯಲ್ಲಿ ವೀಕ್ಷಕನಾಗಿ ಕೆಲಸ ಮಾಡಿ 2017ರಲ್ಲಿ ವಿಮಾ ಇಲಾಖೆಯ ದ್ವೀತಿಯ ದರ್ಜೆ ಸಹಾಯಕ ಹುದ್ದೆಗೆ ಸೇರಿದ್ದೇನೆ. 2022ರ ಮಾ.1ಕ್ಕೆ ನಾನು ಕೆಲಸಕ್ಕೆ ಸೇರಿ 10 ವರ್ಷಗಳಾಗುತ್ತವೆ. ಈ ಎರಡೂ ಹುದ್ದೆಗಳ ವೇತನ ಶ್ರೇಣಿ ಸಮಾನವಾಗಿದ್ದು, ನನಗೆ 10 ವರ್ಷದ ಕಾಲಬದ್ಧ ಬಡ್ತಿ ಲಭ್ಯವಾಗುತ್ತದೆಯೇ?
| ರವಿ ಎಸ್., ಹಾವೇರಿ
ಉತ್ತರ: ದಿನಾಂಕ: 8-3-2017ರ ಸರ್ಕಾರದ ಆದೇಶ ಸಂಖ್ಯೆ ಆಇ13.ಎಸ್ಆರ್ಪಿ 2014ರಂತೆ ಸ್ವಂತ ಕೋರಿಕೆ ಮೇರೆಗೆ ಸರ್ಕಾರಿ ನೌಕರನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಯ ಸಮಾನ ವೇತನ ಶ್ರೇಣಿ ಹುದ್ದೆಗೆ ನೇಮಕವಾದಲ್ಲಿ ಸಲ್ಲಿಸಿದ ಜ್ಯೇಷ್ಠತೆಯನ್ನು ಪರಿಗಣಿಸದೆ, ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ ಶ್ರೇಣಿ ಬಡ್ತಿ ಸೌಲಭ್ಯಗಳಿಗೆ ಪರಿಗಣಿಸಲು ಸೂಚಿಸಲಾಗಿದೆ. ಆದ್ದರಿಂದ ನೀವು 10 ವರ್ಷಗಳ ಕಾಲಬದ್ಧ ಬಡ್ತಿಗೆ ಅರ್ಹರಾಗುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಕೃತಿ ನೋಡಬಹುದು.