ಸರ್ಕಾರಿ ಕಾರ್ನರ್​: ವಿಶೇಷ ಬಡ್ತಿ ನಿಯಮ ಯಾರಿಗೆ ಅನ್ವಯ?

sarkari corner4
Published on

ಪ್ರಶ್ನೆ: ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ನಾನು 24 ವರ್ಷ ಕಾರ್ಯ ನಿರ್ವಹಿಸಿ 2015ರಲ್ಲಿ ನಿವೃತ್ತಿ ಆಗಿದ್ದೇನೆ. ನಾನು ಕೆಲಸಕ್ಕೆ ಸೇರಿದಾಗ 36 ವರ್ಷ. 30 ವರ್ಷದ ನಂತರ ಸೇರಿದ್ದರೆ 2 ವಿಶೇಷ ಬಡ್ತಿ ನೀಡುವ ನಿಯಮ ಸರ್ಕಾರಿ ಸಿಬ್ಬಂದಿಗೆ ಇದೆ. ಈ ನಿಯಮ ಖಾಸಗಿ ಅನುದಾನಿತ ಕಾಲೇಜಿನ ಸಿಬ್ಬಂದಿಗೂ ಅನ್ವಯಿಸಲಿದೆಯೇ?
| ಬಿ.ಎಂ. ಕಟ್ಟಿಮನಿ, ಮುಂಡರಗಿ

ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247| ಎ ಪ್ರಕಾರ ರಾಜ್ಯ ಸರ್ಕಾರಿ ಕೆಲಸಕ್ಕೆ 30 ವರ್ಷ ವಯಸ್ಸಿನ ನಂತರ ಸೇರಿದರೆ ಪಿಂಚಣಿ ಸೌಲಭ್ಯಕ್ಕಾಗಿ ಗರಿಷ್ಠ ಎರಡು ವರ್ಷಗಳ ಹೆಚ್ಚುವರಿ ಆರ್ಹತದಾಯಕ ಸೇವೆ ಸೇರಿಸಲಾಗುತ್ತದೆ. ಆದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ 30 ವರ್ಷಗಳ ನಂತರ ಕೆಲಸಕ್ಕೆ ಸೇರಿದರೆ ಈ ಸೌಲಭ್ಯವು ಲಭ್ಯವಾಗುವುದಿಲ್ಲ. ಆದ್ದರಿಂದ ನಿಮಗೆ ಈ ಎರಡು ವರ್ಷಗಳ ಹೆಚ್ಚುವರಿ ಅರ್ಹತದಾಯಕ ಸೇವೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net