

ಪ್ರಶ್ನೆ: ಸರ್ಕಾರಿ ನೌಕರರಾಗಿದ್ದ ನಮ್ಮ ತಂದೆ ಸೇವೆಯಲ್ಲಿರುವಾಗಲೇ ಅನಾರೋಗ್ಯದಿಂದ ನಿಧನ ಹೊಂದಿದರು. ನನ್ನ ತಂದೆಯ ಮೊದಲ ಪತ್ನಿಗೆ ಎರಡು ಹೆಣ್ಣು ಮಕ್ಕಳಿದ್ದು, ಅವರು ವಿವಾಹಿತರಾಗಿದ್ದಾರೆ. ನಾನು ನನ್ನ ತಂದೆಯ ಎರಡನೇ ಪತ್ನಿಯ ಏಕೈಕ ಪುತ್ರನಾಗಿದ್ದು, ಈಗ 25 ವರ್ಷಗಳಾಗಿರುತ್ತದೆ. ನಾನು ಬಿ.ಎಸ್ಸಿ., ಪದವೀಧರನಾಗಿದ್ದು, ನನಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಲಭಿಸುವುದೇ? ಯಾವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬೇಕು ?
ಪ್ರಶಾಂತ್ ಎಂ. ಹೆಗಡೆ, ಕಾರವಾರ
ಉತ್ತರ: ಸರ್ಕಾರವು ಸುಪ್ರೀಂಕೋರ್ಟ್ ಸಿವಿಲ್ ಅಪೀಲು ಸಂಖ್ಯೆ 1620/2022 ಆದೇಶದನ್ವಯ ದಿನಾಂಕ: 30-04-2022 ರಂದು ಸುತ್ತೋಲೆಯನ್ನು ಹೊರಡಿಸಿ (ಸಂಖ್ಯೆ: ಸಿಆಸುಇ 12 ಸೇಅನೇ 2022) ಮೃತ ನೌಕರನ ಕಾನೂನು ಬಾಹಿತ ಎರಡನೇ ಅಥವಾ ನಂತರದ ಪತ್ನಿಯಿಂದ ಜನಿಸಿದ ಮಕ್ಕಳನ್ನು ಸಹ ಅನುಕಂಪದ ಆಧಾರದ ಮೇಲೆ ಪರಿಗಣಿಸುವಂತೆ ಸೂಚಿಸಿದೆ. ಆದ್ದರಿಂದ ನೀವು 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಾವಳಿ ನಿಯಮ 3ರ ಮೇರೆಗೆ ಅರ್ಹರು. ನೀವು ಪದವೀಧರ ರಾಗಿರುವುದರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಬಹುದು.