ಸರ್ಕಾರಿ ಕಾರ್ನರ್​ | ಪ್ರೊಬೇಷನ್ ಅವಧಿಯಲ್ಲಿ ರಜೆ

corner
Published on
ದಿನದ ಪ್ರಶ್ನೆ 

ಪರೀಕ್ಷಾರ್ಥ ಅವಧಿಯ ಸರ್ಕಾರಿ ನೌಕರನಾಗಿದ್ದು, ನಮ್ಮ ಕಚೇರಿಯಲ್ಲಿ ಪ್ರೊಬೇಷನ್ ಅವಧಿ ಮುಗಿಯುವವರೆಗೂ ಯಾವುದೇ ರಜೆ ಇರುವುದಿಲ್ಲವೆಂದು ನನ್ನ ಮನವಿ ತಿರಸ್ಕರಿಸುತ್ತಿದ್ದಾರೆ. ನನಗೆ ಸಾಂರ್ದಭಿಕ ರಜೆ ಲಭ್ಯವಾಗುತ್ತದೆಯೇ?

| ಶ್ರೀಧರ್ ಹಾಸನ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 145ರಂತೆ ಪ್ರೊಬೇಷನ್ ಅವಧಿಯಲ್ಲಿರುವ ಸರ್ಕಾರಿ ನೌಕರನು ತಾತ್ಕಾಲಿಕ ನೌಕರನಾಗಿದ್ದು, ಅವನು ಕಾಯಂ ನೌಕರನಿಗಿರುವ ಸಾಂರ್ದಭಿಕ ರಜೆ, ನಿರ್ಬಂಧಿತ ರಜೆ, ಗಳಿಕೆ ರಜೆ, ಹಾಗೂ ಇನ್ನಿತರ ರಜೆ ಸೌಲಭ್ಯಗಳನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಹಾಗಾಗಿ ನೀವು ಈ ನಿಯಮಾವಳಿ ರೀತ್ಯ ಮನವಿಯನ್ನು ಸಲ್ಲಿಸಿ ರಜೆ ಸೌಲಭ್ಯ ಪಡೆಯಬಹುದು. ಅನುಬಂಧ ಬಿ ಪ್ರಕಾರ ಮೊದಲ ಒಂದು ವರ್ಷದಲ್ಲಿ ತಿಂಗಳಿಗೆ ಒಂದರಂತೆ ಸಾಂರ್ದಭಿಕ ರಜೆ ಲಭ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net