ಸರ್ಕಾರಿ ಕಾರ್ನರ್​: ಹೆರಿಗೆ ರಜೆ ಸೌಲಭ್ಯ ಮಂಜೂರಾತಿ

corner
Published on
ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು, ಹೆರಿಗೆಯಾದ 2 ತಿಂಗಳ ನಂತರ ಕೆಲಸಕ್ಕೆ ಹಾಜರಾಗಲಿದ್ದೇನೆ. ನನಗೆ ಹೆರಿಗೆ ರಜೆ ದೊರಕುವುದೇ?

| ಮಂಜುಳಾದೇವಿ ಮಂಡ್ಯ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135(1)ರಂತೆ ಹೆರಿಗೆ ರಜೆಯನ್ನು ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ವರೆಗೆ ಮಂಜೂರು ಮಾಡಲಾಗುತ್ತದೆ. ಆದರೆ ನೀವು ಕರ್ತವ್ಯಕ್ಕೆ ಸೇರುವ ಮೊದಲೇ ಹೆರಿಗೆ ಆಗಿರುವುದರಿಂದ ನಿಮಗೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net