ಸರ್ಕಾರಿ ಕಾರ್ನರ್: ಪಿಂಚಣಿದಾರರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ

corner
Published on
ದಿನದ ಪ್ರಶ್ನೆ

ನಾನು ಸರ್ಕಾರಿ ನೌಕರನಾಗಿದ್ದು, ನನ್ನ ತಾಯಿಯು 9,000 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ಸೌಲಭ್ಯ ಲಭಿಸುವುದೇ?

| ರಾಜಪ್ಪ ಹಾಸನ

ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಚಿಕಿತ್ಸಾ) ನಿಯಮಾವಳಿ 1963ರ ನಿಯಮ 2ರಲ್ಲಿ ಸರ್ಕಾರಿ ನೌಕರರ ತಂದೆ -ತಾಯಿ ಪಿಂಚಣಿದಾರರಾಗಿದ್ದು, ಅವರು ಕನಿಷ್ಠ ವೇತನ ಮತ್ತು ಅದಕ್ಕೆ ಕಾಲಕಾಲಕ್ಕೆ ಲಭ್ಯವಾದ ತುಟ್ಟಿಭತ್ಯೆ ಒಳಗೊಂಡ ಮೊಬಲಕ್ಕಿಂತ ಹೆಚ್ಚು ಪಡೆಯುವ ಪಿಂಚಣಿದಾರರಾಗಿದ್ದಲ್ಲಿ ಅವರಿಗೆ ಈ ವೈದ್ಯಕೀಯ ವೆಚ್ಚದ ಮರುಪಾವತಿ ಸೌಲಭ್ಯ ಲಭ್ಯವಾಗುವುದಿಲ್ಲ. ಆದರೆ, ನಿಮ್ಮ ತಾಯಿಯು 9,000 ರೂ. ಪಡೆಯುತ್ತಿದ್ದು, ಅದು ಪ್ರಸ್ತುತ ಕನಿಷ್ಠ ವೇತನ 8,500 ರೂ. ಮತ್ತು ಅದಕ್ಕೆ ಲಭ್ಯವಾಗುವ ತುಟ್ಟಿಭತ್ಯೆ ಶೇ.11.25 ಕ್ಕಿಂತ ಕಡಿಮೆ ಇರುವುದರಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅರ್ಹರಾಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net