ಸರ್ಕಾರಿ ಕಾರ್ನರ್​: ಕುಟುಂಬ ಪಿಂಚಣಿ ದೊರೆಯುತ್ತದೆಯೇ?

pension
Published on

ಪ್ರಶ್ನೆ: ನನ್ನ ತಂದೆ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ನಿಧನ ನಂತರ ಅನುಕಂಪದ ಮೇರೆಗೆ ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕುಟುಂಬ ಪಿಂಚಣಿ ನನ್ನ ತಾಯಿಯವರಿಗೆ ಬರುತ್ತಿದ್ದು, ನನ್ನ ತಾಯಿಯು ಸಹ ಇತ್ತೀಚೆಗೆ ಮರಣ ಹೊಂದಿರುತ್ತಾರೆ. ಈಗ ಕುಟುಂಬ ಪಿಂಚಣಿ ರದ್ದಾಗುತ್ತದೆಯೇ? ಅಥವಾ ನನಗೆ ಲಭ್ಯವಾಗುತ್ತದೆಯೇ?

-ಹಾಲೇಶ್​ ಎಚ್​.ಎಂ., ಚಿಕ್ಕಮಗಳೂರು

ಉತ್ತರ : 2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿಯ ನಿಯಮ 8(ಸಿ) ರಂತೆ ಮೃತ ನೌಕರನ 18 ವರ್ಷವಾಗದಿರುವ ಮಗನಿಗೆ ಈ ಕುಟುಂಬ ಪಿಂಚಣಿ ಮುಂದುವರಿಯುತ್ತದೆ. ಆದರೆ ನೀವು ಅನುಕಂಪದ ನೌಕರಿ ಪಡೆದಿದ್ದು, 18 ವರ್ಷ ಆಗಿರುವುದರಿಂದ ನಿಮ್ಮ ತಾಯಿಗೆ ಬರುತ್ತಿದ್ದ ಕುಟುಂಬ ಪಿಂಚಣಿ ರದ್ದಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net