

ಸರ್ಕಾರಿ ನೌಕರರಾಗಿದ್ದ ನನ್ನ ತಂದೆ, 2022ರ ನ.2ರಂದು ನಿಧನರಾದರು. ಅವರಿಗೆ ನಾನು ದತ್ತು ಪುತ್ರಿಯಾಗಿದ್ದು, ಅನುಕಂಪದ ಆಧಾರದ ನೌಕರಿ ಸಿಗುವುದೇ?
| ಸುಧಾ ಪಾಂಚಲ್ ಬೆಳಗಾವಿ
1996 ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿಯ ನಿಯಮ 3ರಂತೆ ನಿಧನ ಹೊಂದಿದ ಸರ್ಕಾರಿ ನೌಕರನ ಅವಲಂಬಿತ ದತ್ತು ಮಕ್ಕಳು ಸಹ ಅನುಕಂಪದ ನೌಕರಿಗೆ ಅರ್ಹರು. ಹಾಗಾಗಿ ನೀವು ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಒಂದು ವರ್ಷದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.