

ನಾನು 25 ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕನಾಗಿದ್ದೇನೆ. ಉರ್ದು ಸಾಹಿತ್ಯಿಕ ಸಂಘದ ಸಹ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದು, ಇದಕ್ಕೆ ಅನುಮತಿ ಅವಶ್ಯಕವೇ? ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬಹುದೇ?
| ವಾಜಿದ್ ಅಖ್ತರ್ ಕಲಬುರಗಿ
2021 ಕರ್ನಾಟಕ ಸರ್ಕಾರಿ ಸೇವಾ (ನಡತೆ)ನಿಯಮಾವಳಿಯ ನಿಯಮ 7 ರಂತೆ ಯಾವುದೇ ಸರ್ಕಾರಿ ನೌಕರ ಭಾರತದ ಸಾರ್ವಭೌಮತ್ವದ ಮತ್ತು ಅಖಂಡತೆಯ ಅಥವಾ ನೈತಿಕತೆಯ ಹಿತಾಸಕ್ತಿಗೆ ಧಕ್ಕೆಯನ್ನುಂಟು ಮಾಡುವ ಸಂಘಕ್ಕೆ ಸೇರತಕ್ಕದ್ದಲ್ಲ. ಆದರೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಪೂರ್ವಾನುಮತಿ ಇಲ್ಲದೆ ಸೇರಬಹುದು. ಹಾಗಾಗಿ ನೀವು ಉರ್ದು ಸಾಹಿತ್ಯಿಕ ಸಂಘದಲ್ಲಿ ಪದಾಧಿಕಾರಿಯಾಗಲು ಅನುಮತಿ ಬೇಕಿಲ್ಲ. ನಿಮ್ಮ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆ ಉದ್ಭವಿಸುವುದಿಲ್ಲ. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ನಡತೆ ನಿಯಮಗಳು-ಸಮಗ್ರ ಕೈಪಿಡಿ ಪುಸ್ತಕ ನೋಡಬಹುದು.