

ಪ್ರಶ್ನೆ: ಕರ್ನಾಟಕ ಹಾಲು ಒಕ್ಕೂಟದ ಮೈಸೂರು ಮಿಲ್ಕ್ ಡೇರಿಯಲ್ಲಿ 2018ರಿಂದ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ನೌಕರಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಂಕಣದಲ್ಲಿ ನೀವು ಸರ್ಕಾರಿ ನೌಕರರೇ? ಎಂದು ಕೇಳಲಾಗುತ್ತದೆ. ನಾವು ಸರ್ಕಾರಿ ನೌಕರರೇ? ನಮ್ಮ ಸೇವಾ ಅವಧಿಯನ್ನು ಸರ್ಕಾರದ ಇತರ ಹುದ್ದೆಗಳಿಗೆ ಆಯ್ಕೆಯಾದರೆ ಪರಿಗಣಿಸಲಾಗುವುದೇ?
| ಶರತ್ ಕುಮಾರ್, ಮೈಸೂರು
ಉತ್ತರ: ನೀವು ಕೆಲಸ ಮಾಡುತ್ತಿರುವ ಮೈಸೂರು ಮಿಲ್ಕ್ ಡೇರಿಯು ಸರ್ಕಾರದ ಇಲಾಖೆಯಾಗಿರದೆ ಅದು ಅರೆ ಸರ್ಕಾರಿ ಸಂಸ್ಥೆಯಾಗಿದೆ. ಹೀಗಿರುವಾಗ ನೀವು ಸರ್ಕಾರಿ ನೌಕರರಲ್ಲ. ಆದ್ದರಿಂದ ನಿಮ್ಮ ಸೇವೆಯನ್ನು ಸರ್ಕಾರಿ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.