

ದಿನದ ಪ್ರಶ್ನೆ
ನಾನು ಮಾಜಿ ಸೈನಿಕನಾಗಿದ್ದು, 2014ರ ಜನವರಿ 31ರಂದು ಪ್ರೌಢಶಾಲಾ ಶಿಕ್ಷಕನಾಗಿ ಸೇರಿದ್ದೇನೆ. ನನ್ನ ಜನ್ಮ ದಿನಾಂಕ: 03.05.1962 ಆಗಿದ್ದು, ನನಗೆ ಎರಡು ವರ್ಷ ಹೆಚ್ಚುವರಿ ಹಣ ಸೇವೆ ಲಭ್ಯವಾಗುವುದೇ. 2019ರ ಜನವರಿಯಲ್ಲಿ ಮೂಲ ವೇತನ ರೂ.52,650/- ಆಗಿದ್ದು, ನನಗೆ ಪಿಂಚಣಿ, ನಿವೃತ್ತಿ ಉಪದಾನ ಮತ್ತು ಕಮ್ಯೂಟೇಷನ್ ಎಷ್ಟು ದೊರಕುತ್ತದೆ.
| ಚಂದ್ರಶೇಖರ್ ರೆಡ್ಡಿ ಬಳ್ಳಾರಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ 247(ಬಿ) ಪ್ರಕಾರ ಸೈನಿಕ ಪಿಂಚಣಿಗೆ ಬದಲು ರಾಜ್ಯ ಸರ್ಕಾರಕ್ಕೆ ಸಂಯೋಜಿತ ಪಿಂಚಣಿಗಾಗಿ ಹಿಂದಿನ ಸೈನಿಕ ಸೇವೆಯನ್ನು ತೆಗೆದುಕೊಳ್ಳಲು ಅನುಮತಿಸಲಾಗಿಲ್ಲದಿದ್ದರೆ, ಗರಿಷ್ಠ ನಾಲ್ಕು ವರ್ಷಗಳಷ್ಟು ಅರ್ಹತಾದಾಯಕ ಸೇವೆಗೆ ಸೇರಿಸಲಾಗುತ್ತದೆ. ಆದ್ದರಿಂದ ದಿನಾಂಕ : 31.10.2022ರಂದು ಒಟ್ಟು ಅರ್ಹ ಸೇವೆ 22 ವರ್ಷಗಳಾಗಿರುತ್ತವೆ. ಮತ್ತು ಅಂತಿಮ ಉಪಲಬ್ದಿ ರೂ.52,650 ಆಗುವುದರಿಂದ ಲೆಕ್ಕಾಚಾರದ ರೀತಿ, ಪಿಂಚಣಿ ರೂ.20,182, ನಿವೃತ್ತಿ ಉಪದಾನ ರೂ.6,05,475 ಹಾಗೂ ಕಮ್ಯೂಟೇಷನ್ ಮೊಬಲಗು ರೂ.9,52,590 ಆಗುತ್ತದೆ.