ಸರ್ಕಾರಿ ಕಾರ್ನರ್ | ಸರ್ಕಾರಿ ಸಾಕ್ಷಿಯಾಗಲು ರಜೆ ಅವಕಾಶ

corner
Published on
ದಿನದ ಪ್ರಶ್ನೆ 

ಸರ್ಕಾರಿ ದಾವೆಯೊಂದರಲ್ಲಿ ಸಾಕ್ಷಿಯಾಗಿ ನಾನು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುತ್ತೇನೆ. ಹಾಜರಾತಿ ಪ್ರಮಾಣಪತ್ರವನ್ನು ಕಚೇರಿ ಮುಖ್ಯಸ್ಥರಿಗೆ ನೀಡಿದರೂ ಆ ದಿನ ಆಕಸ್ಮಿಕ ರಜೆಯೆಂದು ಪರಿಗಣಿಸಿ ಪ್ರಮಾಣಪತ್ರ ತಿರಸ್ಕರಿಸಿರುತ್ತಾರೆ. ಇದು ಸರಿಯೇ?

| ಮಹೇಂದ್ರ ಕೋಲಾರ

2021ರ ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಾವಳಿಯ ನಿಯಮ 12(3) ರಂತೆ ಸರ್ಕಾರಿ ನೌಕರನು ನಿಯಮಿಸಿದ ಪ್ರಾಧಿಕಾರದ ಪೂರ್ವ ಮಂಜೂರಾತಿ ಪಡೆಯದೆ ಯಾವುದೇ ನ್ಯಾಯಿಕ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ಸಾಕ್ಷ್ಯ ನೀಡುವುದಕ್ಕೆ ಅವಕಾಶವಿರುತ್ತದೆ. ಆದ್ದರಿಂದ ನೀವು ಕಚೇರಿ ಮುಖ್ಯಸ್ಥರಿಗೆ ನೀಡಿದ ಹಾಜರಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಅನ್ಯ ಕಾರ್ಯ ನಿಮಿತ್ತವೆಂದು ನಮೂದಿಸಬೇಕು. ಸಾಂರ್ದಭಿಕ ರಜೆಯೆಂದು ಪರಿಗಣಿಸಿರುವುದು ಸರಿಯಾದ ಕ್ರಮವಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net