ನಟ ಧ್ರುವ ಸರ್ಜಾ ಪತ್ನಿಗೆ ಅದ್ಧೂರಿ ಸೀಮಂತ; ಕುಟುಂಬಸ್ಥರು, ಆಪ್ತರು ಭಾಗಿ..

Dhruva
Published on

ಬೆಂಗಳೂರು: ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವು ಇಂದು ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು.

ಧ್ರುವ ಅವರ ಸೋದರ ಮಾವ, ಖ್ಯಾತ ನಟ ಅರ್ಜುನ್​ ಸರ್ಜಾ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸರ್ಜಾ ಕುಟುಂಬಸ್ಥರು ಮತ್ತು ಅತ್ಯಾಪ್ತರ ವರ್ಗದವರು ಪಾಲ್ಗೊಂಡಿದ್ದರು.

ನಟ ಧ್ರುವ ತಂದೆಯಾಗಲಿರುವ ಸುದ್ದಿಯನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಇದೀಗ ಸೀಮಂತ ವಿಶೇಷವಾಗಿ ನಡೆದಿದ್ದು, ಬರಲಿರುವ ಮಗುವಿನ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ. ಈ ಸಮಾರಂಭದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net