ಸರ್ಕಾರಿ ಕಾರ್ನರ್ | ವೇತನ ರಕ್ಷಣೆ ಪಡೆಯುವ ನಿಯಮ

corner
Published on
ದಿನದ ಪ್ರಶ್ನೆ 

ಪ್ರೌಢಶಾಲಾ ಶಿಕ್ಷಕನಾಗಿರುವ ನಾನು, ಇಲಾಖೆಯಿಂದ ಅನುಮತಿ ಪಡೆದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಪ್ರಸ್ತುತ ನನ್ನ ಮೂಲ ವೇತನ 47,650 ರೂ. ಆಗಿದ್ದು, ಪಪೂ ಕಾಲೇಜಿನ ಪ್ರಾರಂಭಿಕ ಮೂಲ ವೇತನ 44,600 ರೂ. ಆಗಿರುವುದರಿಂದ ವೇತನ ರಕ್ಷಣೆ ಪಡೆಯುತ್ತೇನೆಯೇ? ಅಥವಾ ಉಪನ್ಯಾಸಕರ ಪ್ರಾರಂಭಿಕ ವೇತನ ಪಡೆಯುತ್ತೇನೆಯೇ?

| ಮಹದೇವ ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ಮೇರೆಗೆ ನಿಮಗೆ ವೇತನ ರಕ್ಷಣೆ ಲಭ್ಯವಾಗುತ್ತದೆ. ಹಾಗಾಗಿ ನಿಮ್ಮ ಮೂಲ ವೇತನವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಕನಿಷ್ಠ ವೇತನ ನಿಗದಿ ಮಾಡದೆ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ 47,650 ರೂ.ಗೆ ನಿಗದಿಪಡಿಸಲಾಗುತ್ತದೆ. ಆದುದರಿಂದ ನೀವು ಈ ನಿಯಮಾನುಸಾರ ವೇತನ ರಕ್ಷಣೆಯನ್ನು ಕೋರಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net