

ಸಿ ಗ್ರೂಪ್ ನೌಕರರಾಗಿದ್ದ ನನ್ನ ತಂದೆ ಹೃದಯಾಘಾತ ದಿಂದ ನಿಧನರಾದರು. ಅನುಕಂಪ ಆಧಾರದ ಮೇಲೆ ನೌಕರಿ ಪಡೆಯಲು ವಾರ್ಷಿಕ ಆದಾಯ ಎಷ್ಟಿರಬೇಕು?
| ಲಕ್ಷ್ಮೀ ದಾವಣಗೆರೆ
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿಯ ನಿಯಮ 4 (1)ರಂತೆ 9.4.2021ರಂದು ತಿದ್ದುಪಡಿ ಮಾಡಿ ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರು ಸೇವೆಯಲ್ಲಿರುವಾಗಲೇ ನಿಧನರಾದರೆ ಅವರ ಕೌಟುಂಬಿಕ ಆದಾಯ ಮಿತಿ ತೆಗೆದುಹಾಕಲಾಗಿದೆ.