ಸರ್ಕಾರಿ ಕಾರ್ನರ್​: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

corner
Published on
ದಿನದ ಪ್ರಶ್ನೆ 

ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಅರ್ಹರಾಗಲು ಕಿಯೋನಿಕ್ಸ್ ಸಂಸ್ಥೆ ನಡೆಸುವ ಕೋರ್ಸ್​ನ ಪ್ರಮಾಣಪತ್ರ ಪಡೆದರೆ ಸಾಕೇ? ಅಥವಾ ಆನ್​ಲೈನ್ ಪರೀಕ್ಷೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕೇ? ಯಾವ ಕೋರ್ಸ್ ಮಾಡಿದವರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ಇದೆ?

| ಶ್ರೀದೇವಿ ಬೆಂಗಳೂರು

- ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯ. ಆದರೆ, ನೀವು ಕೇಳಿರುವಂತೆ ಕಿಯೋನಿಕ್ಸ್ ಸಂಸ್ಥೆ ಪ್ರಮಾಣಪತ್ರ ಅಥವಾ ಇನ್ನಿತರ ಯಾವುದೇ ಕೋರ್ಸ್ ಮಾಡಿದರೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ಪಡೆಯಲು ಈ ನಿಯಮಾವಳಿ ರೀತ್ಯ ಅವಕಾಶವಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾಕಾನೂನು ಕೈಪಿಡಿ ಪುಸ್ತಕ’ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net