ಸರ್ಕಾರಿ ಕಾರ್ನರ್ | ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಕೆ ನಿಯಮ

corner
Published on
ದಿನದ ಪ್ರಶ್ನೆ

ನಾನು ಸರ್ಕಾರಿ ನೌಕರನಾಗಿದ್ದು, ಕಳೆದೊಂದು ವರ್ಷದಿಂದ ಅಶಿಸ್ತಿನ ಕ್ರಮವಾಗಿ ಶಿಸ್ತು ಪ್ರಾಧಿಕಾರಿಯವರು ನನ್ನನ್ನು ಅಮಾನತ್ತಿನಲ್ಲಿಟ್ಟಿದ್ದಾರೆ. ಆದರೆ, ನಾನು 20 ವರ್ಷ ಸೇವೆ ಪೂರೈಸಿರುವುದರಿಂದ ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಸಲು ಬಯಸಿದ್ದೇನೆ. ನನ್ನ ಈ ಅಮಾನತ್ತಿನ ಅವಧಿಯನ್ನು ಏನೆಂದು ಪರಿಗಣಿಸಲಾಗುತ್ತದೆ?

| ಕಾಮತ್ ರಾಮನಗರ

ಸರ್ವೇಚ್ಚ ನ್ಯಾಯಾಲಯವು ಆರ್.ಎಸ್. ನಾಯಕ್ ವಿರುದ್ಧ ಕರ್ನಾಟಕ ರಾಜ್ಯ 1982(1)ರ ಪ್ರಕರಣದಲ್ಲಿ ಅಮಾನತ್ತಿನಲ್ಲಿರುವ ಸರ್ಕಾರಿ ನೌಕರ ಸ್ವಇಚ್ಛಾ ನಿವೃತ್ತಿ ಕೋರಿದಾಗ ಅದನ್ನು ಅಂಗೀಕರಿಸಿ, ಶಿಸ್ತು ಕ್ರಮ ಕೈಬಿಟ್ಟರೆ ಆಗ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಲು ಸೂಚಿಸಲಾಗಿರುತ್ತದೆ. ಹಾಗಾಗಿ ನೀವು ಸ್ವಇಚ್ಛಾ ನಿವೃತ್ತಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(1)ರ ಮೇರೆಗೆ 3 ತಿಂಗಳ ಮುಂಚೆಯೇ ಕೋರಿಕೆ ಸಲ್ಲಿಸಬಹುದು. ನಿಮ್ಮ ಕೋರಿಕೆ ಅಂಗೀಕರಿಸಿದರೆ ನಿಮ್ಮ ಅಮಾನತ್ತಿನ ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಿ ನಿವೃತ್ತಿ ವೇತನ ಸೌಲಭ್ಯ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net