ಸರ್ಕಾರಿ ಕಾರ್ನರ್: ಸ್ವಯಂ ನಿವೃತ್ತಿಗೆ ಸಿಗುವ ಸೇವಾ ಅಧಿಕ್ಯ

corner
Published on
ದಿನದ ಪ್ರಶ್ನೆ 

ನಾನು ಸರ್ಕಾರಿ ಸೇವೆಯಲ್ಲಿ 28 ವರ್ಷ ಕೆಲಸ ಮಾಡಿದ್ದು, ಪ್ರಸ್ತುತ ವಯಸ್ಸು 58 ಆಗಿದೆ. ಸದ್ಯ ನನ್ನ ಸೇವಾ ಅವಧಿ 2 ವರ್ಷ ಉಳಿದಿರುತ್ತದೆ. ನಾನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಸ್ವಯಂ ನಿವೃತ್ತಿ ಪಡೆದರೆ ಸಿಗುವ ಸೇವಾ ಅಧಿಕ್ಯ (ವೈಟೇಜ್) ಎಷ್ಟು?

| ಅನಿತಾ ಮದಬಾವಿ ವಿಜಯಪುರ

- ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 285 (2)ರ ರೀತ್ಯ 15 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದುವ ನೌಕರರಿಗೆ 5 ವರ್ಷ ಸೇವಾ ಅಧಿಕ್ಯ ದೊರಕುತ್ತದೆ. ಆದರೆ, ಇದು ಒಟ್ಟು ಅರ್ಹತಾದಾಯಕ ಸೇವೆ 33 ವರ್ಷಗಳನ್ನು ದಾಟಬಾರದು. ಆದ ಕಾರಣ ನಿಮಗೆ 2 ವರ್ಷ ಸೇವಾ ಅಧಿಕ್ಯ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net