ಸರ್ಕಾರಿ ಕಾರ್ನರ್​: ಅಮಾನತುಗೊಂಡವರ ಮರು ನಿಯೋಜನೆ- ನಿಯಮವೇನು?

sarkari-corner4
Published on

ಪ್ರಶ್ನೆ: ಎರಡನೇ ದರ್ಜೆ ಸಹಾಯಕನಾದ ನನ್ನನ್ನು ದುರ್ನಡತೆ ಆರೋಪದ ಮೇರೆಗೆ 2021ರ ಅ.21ರಂದು ಶಿಸ್ತು ಪ್ರಾಧಿಕಾರಿಯು ಕೆಲಸದಿಂದ ಅಮಾನತು ಮಾಡಿದರು. ಅಲ್ಲದೆ, ನನ್ನ ಕೇಂದ್ರ ಕಾರ್ಯಸ್ಥಾನವನ್ನು ಬೆಂಗಳೂರಿನಿಂದ ಮಂಗಳೂರಿಗೆ ಬದಲಾವಣೆ ಮಾಡಿದರು. ಆದರೆ, ಇಲ್ಲಿ ಈವರೆಗೂ ನನ್ನನ್ನು ಕೆಲಸಕ್ಕೆ ವಾಪಸ್​ ತೆಗೆದು ಕೊಂಡಿರುವುದಿಲ್ಲ. ಹಾಗಾಗಿ ನಾನು ಏನು ಮಾಡಬೇಕು?

| ಸುರೇಶ್​ ಕೆ.ಎನ್​., ಮಂಗಳೂರು

ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 98ರಂತೆ ಅಮಾನತುಗೊಂಡ ನೌಕರರ ಕೇಂದ್ರ ಕಾರ್ಯಸ್ಥಾನವನ್ನು ಬದಲಾವಣೆ ಮಾಡಬಹುದು. ಸಿ.ಸಿ.ಎ.ನಿಯಮಾವಳಿಯ ನಿಯಮ 10(5)( ಬಿ)ರಂತೆ ಆರು ತಿಂಗಳೊಳಗೆ ಆರೋಪ ಪಟ್ಟಿ ಅಥವಾ ಇಲಾಖಾ ವಿಚಾರಣೆ ಆರಂಭಿಸದೇ ಇದ್ದಲಿ ನೀವು ಶಿಸ್ತು ಅಧಿಕಾರಿಗೆ ಮರು ನಿಯೋಜಿಸಿಕೊಳಲು ವಿನಂತಿಸಬಹುದು. ಹೆಚ್ಚಿನ ವಿವರಗಳಿಗೆ ಎಂ.ಉಮೇಶ್​ ಅವರ "ಸಿ.ಸಿ.ಎ.ನಿಯಮಾವಳಿ - ಸಮಗ್ರ ಕೈಪಿಡಿ' ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net