ರಿದಂ ಕಿಂಗ್, ಸರಿಗಮಪ ಜ್ಯೂರಿ S. Balasubramanyam ನಿಧನ

S Bali
Published on

ಬೆಂಗಳೂರು: ಖ್ಯಾತ ಮೃದಂಗ ವಾದಕರು, ರಿದಂ ಕಿಂಗ್​ ಎಂದೇ ಹೆಸರುವಾಸಿಯಾಗಿದ್ದ ಎಸ್​. ಬಾಲಸುಬ್ರಹ್ಮಣ್ಯಂ (S Balasubramanyam) ಅವರು ನಿಧನರಾಗಿದ್ದಾರೆ. ಬಾಲಿ ಎಂದೇ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷ ವಯಸ್ಸಾಗಿತ್ತು.

ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿದ್ದ ಬಾಲಿ ಅವರು ಖ್ಯಾತ ವಾದ್ಯಗಾರರು, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಬಾಲಿ ಅವರು ಪಡೆದಿದ್ದರು. ಬಾಲಿ ಅವರ ನಿಧನಕ್ಕೆ ನಟ, ನಿರ್ದೇಶಕ ಸಾಧು ಕೋಕಿಲಾ, ನಿರೂಪಕಿ ಅನುಶ್ರೀ​ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net